ಉದ್ಯಾವರಕುದ್ರು ಅಕ್ರಮ ಮರಳುಗಾರಿಕೆ ತಡೆಗೆ ಅದಮಾರು ಶ್ರೀ ಒತ್ತಾಯ

full
Published on

ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉದ್ಯಾವರ ಸೇತುವೆಯ ಎಡಭಾಗದ ಪಾಪನಾಶಿನಿ ಹೊಳೆಯ ತೀರದಲ್ಲಿ  ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ಬಗ್ಗೆ ಕ್ರಮ ಜರುಗಿಸಬೇಕು.  ಉದ್ಯಾವರ ಕುದ್ರು, ಬೊಳ್ಜೆಯ ಸುತ್ತಮುತ್ತ ನಡೆಯುತ್ತಿರುವ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಬೇಕು ಎಂದು ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿಯ ಸುಮಾರು 5ಕ್ಕೂ ಹೆಚ್ಚು ಕಡೆಗಳಲ್ಲಿ ಮರಳು ತೆಗೆಯುವ ಅಕ್ರಮ ದಕ್ಕೆಗಳಿದ್ದು, ಪ್ರತಿದಿನ ಕನಿಷ್ಠ 150 ಯೂನಿಟ್ ಮರಳು ಪಾಪನಾಶಿನಿಯ ಒಡಲಿನಿಂದ ಖಾಲಿಯಾಗುತ್ತಿದೆ. ಇದರಿಂದ ಅನೇಕರ ಜಾಗಗಳು ನೀರು ಪಾಲಾಗುವ ಸಂಭವವಿದೆ. ಈಗಾಗಲೇ ಉದ್ಯಾವರ ಕುದ್ರು ಪರಿಸರದ ಬಹುತೇಕ ಪ್ರದೇಶ ನದಿ ಪಾಲಾಗುತ್ತಿದ್ದು, ದಿನದಿಂದ ದಿನಕ್ಕೆ ಊರಿನ ವಿಸ್ತೀರ್ಣ ಕಡಿಮೆಯಾಗುತ್ತಿದೆ. ದಿನದ 24 ಗಂಟೆಯೂ ಮರಳು ಸಾಗಿಸುವ ವಾಹನಗಳ ನಿರಂತರ ಓಡಾಟದಿಂದ ಅಪರಿಮಿತ ಶಬ್ದಮಾಲಿನ್ಯ, ಪರಿಸರಮಾಲಿನ್ಯದಿಂದ ಊರಿನವರು ಕಂಗೆಟ್ಟಿದ್ದಾರೆ.  ಹಸಿರಿನಿಂದ ಕಂಗೊಳಿಸುತ್ತಿದ್ದ ಊರು ಧೂಳಿನಿಂದ ಮುಚ್ಚಿಹೋಗಿದೆ ಎಂದು ಹೇಳಿದರು.

ಮರಳು ತೆಗೆಯುವ ಕಾರ್ಮಿಕರ ಮುಂತಾದ ಅವ್ಯಾಚ್ಯ ಬೈಗುಳ, ಮಾದಕ ದ್ರವ್ಯ ಸೇವನೆ, ಅನಾಗರಿಕ ವರ್ತನೆಯಿಂದ ಊರಿನ ಜನ ಕಂಗಾಲಾಗಿದ್ದಾರೆ. ಇನ್ನೂ ಕೆಲವು ತಿಂಗಳು ಈ ಮರಳಿನ ದಂಧೆ ಹೀಗೆಯೇ ಮುಂದುವರಿದರೆ  ರೈಲ್ವೇ ಬ್ರಿಡ್ಜ್ ಕುಸಿದು ಬೀಳುವ ಸಂಭವವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net