ಕೂಳೂರು ಅಕ್ರಮ ಮರಳುಗಾರಿಕೆ ಯಂತ್ರೋಪಕರಣ ವಶಕ್ಕೆ

images (8)
Published on

ಮಂಗಳೂರು: ಕೂಳೂರು ಕುದುರೆಮುಖ ಜಂಕ್ಷನ್ ಬಳಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಲ್ಲಿಗೆ ಪಣಂಬೂರು ಪೊಲೀಸರು ದಾಳಿ ಮಾಡಿ ಯಂತ್ರೋಪಕರಣ ವಶಕ್ಕೆ ಪಡೆದಿದ್ದಾರೆ.

ಡ್ರೆಜ್ಜಿಂಗ್ ಯಂತ್ರ, ಹಿಟಾಚಿ, ಟಿಪ್ಪರ್ ಹಾಗೂ ಬೋಟ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸದ್ಯ ಮರಳುಗಾರಿಕೆ ನಡೆಸಲು ಅವಕಾಶ ಇಲ್ಲ. ಆದರೂ ಯಂತ್ರೋಪಕರಣ ಬಳಸಿ ಮರಳುಗಾರಿಕೆ ನಡೆಸುತ್ತಿರುವುದು ಕಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net