

ಜೊಯಿಡಾ: ತಾಲೂಕಿನ ಅಸು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸಾರ್ಲೆ ಮತ್ತು ಚಾಪಾಳಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಮರಳನ್ನು ವಶಕ್ಕೆ ಪಡೆದಿದ್ದಾರೆ.
ಜೊಯಿಡಾ ತಹಸೀಲ್ದಾರ ಬಸವರಾಜ ತೆನ್ನಳ್ಳಿ ನೇತೃತ್ವದಲ್ಲಿ ಕಸಾರ್ಲೆಯಲ್ಲಿ ಒಟ್ಟು 22 ಟಿಪ್ಪರ್, ಚಾಪಾಳಿಯಲ್ಲಿ 6 ಟಿಪ್ಪರ್ ಉಸುಕು ದಾಸ್ತಾನು ಮಾಡಿದ್ದನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ಸರ್ಕಾರಿ ದರದಂತೆ ಸುಮಾರು 4 ಲಕ್ಷ ರೂ.ಆಗಲಿದೆ ಎಂದು ಅಂದಾಜಿಸಲಾಗಿದೆ. ಪೊಲೀಸ್ ಕಂದಾಯ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.