ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 7 ವಾಹನ ಜಪ್ತಿ

Crime Logo
Published on

ರಾಣೆಬೆನ್ನೂರ: ತಾಲೂಕಿನ ಬೇಲೂರು ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 7 ಮಿನಿ ಅಶೋಕ ಲೈಲ್ಯಾಂಡ್​ ವಾಹನಗಳನ್ನು ಕಂದಾಯ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ್ದಾರೆ.
ತಾಲೂಕಿನ ಹರನಗಿರಿ ಗ್ರಾಮದ ಶರಣಪ್ಪ ಕುಪ್ಪೇಲೂರ, ಹೀಲದಹಳ್ಳಿಯ ಕೋಟ್ರೇಶ ಬಾಲಬಸವರ, ಸುದೀಪ ತಳವಾರ, ಬೇಲೂರ ಗ್ರಾಮದ ಪ್ರವಿಣ ಹಾವಗಪ್ಪನವರ, ಹರೀಶ ದೊಡ್ಡಬಸಪ್ಪನವರ, ಮಾಲತೇಶ ದೊಡ್ಡಮಲ್ಲಪ್ಪನವರ ಸೇರಿ ಒಟ್ಟು 7 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇವರು ಬೇಲೂರು ಗ್ರಾಮದ ಹಟ್ಟಿಗೋಲ್ಡ್​ ಮೈನ್ಸ್​ ಲೀಜ್​ ಪಾಯಿಂಟ್​ನಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಾಹನಗಳನ್ನು ಜಪ್ತಿ ಮಾಡಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net