

ವಿಜಯಪುರ: ವಕ್ಫ್ ಆಸ್ತಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮೀಟಿಗೆ ಸೇರಿದ ತಾಲೂಕಿನ ಬಿದರಕುಂದಿ ಗ್ರಾಮದ ಸರ್ವೇ ನಂ.180/2 ಕ್ಷೇತ್ರ 3.12ಎಕರೆ ಜಮೀನಿನ ಪೈಕಿ 1.15 ಎಕರೆ ಜಮೀನನ್ನು ಡೋಂಗ್ರಿಸಾಬ ಪೀರಸಾಬ ಸಾಗರ, ಶಬ್ಬೀರ ಅಹ್ಮದ ಪೀರಸಾಬ ಸಾಗರ ಇವರಿಗೆ ಸಮಿತಿಯ ಮಾಜಿ ಅಧ್ಯಕ್ಷ ಅಲ್ಲಾಬಕ್ಷ ನಾಯ್ಕೋಡಿ, ಉಪಾಧ್ಯಕ್ಷ ಅಬ್ದುಲಜಬ್ಬಾರ ಗೋಲಂದಾಜ್, ಕಾರ್ಯದರ್ಶಿ ಕಲಿಮುದ್ದೀನ್ ಖಾಜಿ ಇವರೊಂದಿಗೆ 22 ಜನ ಸದಸ್ಯರು ಸೇರಿ ಮಾರಾಟ ಮಾಡಲು ಕಾನೂನು ಬಾಹಿರ ಠರಾವು ಮಾಡಿ ಬಾಂಡ್‌ನಲ್ಲಿ ಘೋಷಣಾ ಪತ್ರ ಮಾಡಿದ್ದಾರೆ.
ಇದನ್ನು ಗಮನಿಸಿದ ವಕ್ಫ್ ಅಧಿಕಾರಿಗಳು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ 153/2023 ಕಾಯ್ದೆ ಕಲಂ ಅನ್ವಯ ಪ್ರಕರಣವನ್ನು ದಾಖಲಿಸಿದ್ದಾರೆ.
ವಕ್ಫ್ ಆಸ್ತಿಯನ್ನು ಮಾರಾಟ, ವರ್ಗಾವಣೆ, ಅಡಮಾನ ಹಾಗೂ ಖಾತೆ ಬದಲಾವಣೆ ಮಾಡುವುದು ವಕ್ಫ್ ಕಾಯ್ದೆ ಕಲಂ 5152ಎರ ಪ್ರಕಾರ ದಂಡನೀಯ ಅಪರಾಧವಾಗಿದ್ದು, ವಕ್ಫ್ ಆಸ್ತಿಯನ್ನು ಯಾರೂ ಮಾರಾಟ-ಕಬ್ಜಾ- ವತ್ತಿ ಹಾಗೂ ಇನ್ನಿತರ ವ್ಯವಹಾರಗಳನ್ನು ಮಾಡಬಾರದು ಎಂದು ವಿಜಯಪುರ ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.