ಕಿರಾಣಿ ಅಂಗಡಿಗಳಲ್ಲೂ ಎಗ್ಗಿಲ್ಲದೇ ಅಕ್ರಮವಾಗಿ ಮದ್ಯ ಮಾರಾಟ

13sor2..
ಸೊರಬ ತಾಲೂಕು ಚಿಕ್ಕ ದ್ಯಾವಸ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ನಿಲ್ಲಿಸುವಂತೆ ಮಹಿಳೆಯರು ಅಬಕಾರಿ ಇನ್ಸ್‌ಪೆಕ್ಟರ್‌ಗೆ ಮನವಿ ಸಲ್ಲಿಸಿದರು. ಮಮತಾ, ಸವಿತಾ, ಪಾರ್ವತಿ, ಶಾರದಾ ಇತರರಿದ್ದರು.
Published on

ಸೊರಬ: ಕಿರಾಣಿ ಅಂಗಡಿದಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ತಾಲೂಕಿನ ಚಿಕ್ಕದ್ಯಾವಾಸ ಗ್ರಾಮದ ಭೂತೇಶ್ವರ ಯುವಕ ಸಂಘದ ನೇತೃತ್ವದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿ, ಅಬಕಾರಿ ಇನ್‌ಸ್ಪೆಕ್ಟರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ತಾಲೂಕಿನ ಹರೀಶಿ ಗ್ರಾಪಂ ವ್ಯಾಪ್ತಿಯ ಚಿಕ್ಕದ್ಯಾವಾಸ ಗ್ರಾಮದಲ್ಲಿನ ಕಿರಾಣಿ ಅಂಗಡಿಗಳು, ಹರೀಶಿ ಸರ್ಕಲ್‌ನಲ್ಲಿರುವ ಹೋಟೆಲ್‌ಗಳಲ್ಲೂ ಎಗ್ಗಿಲ್ಲದೇ ಮದ್ಯ ಮಾರಾಟ ಮಾರಾಟ ಮಾಡುತ್ತಿದ್ದು, ಯುವಕರು, ವೃದ್ಧರು ಮದ್ಯದ ದಾಸರಾಗಿದ್ದು, ಮನೆಗಳಲ್ಲಿ ಪರಿಸ್ಥಿತಿ ಕೆಟ್ಟಿದೆ. ಹಳ್ಳಿಗಳಲ್ಲಿ ನೆಮ್ಮದಿ ಹಾಳಾಗಿದೆ. ಕೂಡಲೇ ಅಧಿಕಾರಿಗಳು ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಮತಾ, ಸವಿತಾ, ಪಾರ್ವತಿ, ಶಾರದಾ, ಸಂಗೀತಾ, ಅನುರಾಧಾ, ಮೀನಾಕ್ಷಿ ರತ್ನಕರ, ಗೌರಮ್ಮ, ಗೌರಿ, ಬೇಗಂ, ಕಲಾವತಿ, ಪ್ರೇಮಾ, ಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net