ಗದಗ: ಅಕ್ಕಿ ಆಯ್ತು, ಈಗ ಹಾಲಿನ ಪುಡಿ

23GDG05
Published on

ಶಿವಾನಂದ ಹಿರೇಮಠ ಗದಗ
ಜಿಲ್ಲೆಯಾದ್ಯಂತ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟದ ಜತೆಗೆ ಶಿಕ್ಷಣ ಇಲಾಖೆಯಿಂದ ಶಾಲಾ ಮಕ್ಕಳಿಗೆ ಪೂರೈಕೆ ಆಗುವ ಹಾಲಿನ ಪುಡಿ ಪ್ಯಾಕೇಟ್​ಗಳ ಅಕ್ರಮ ಸಂಗ್ರಹ ಮತ್ತು ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ ಗಜೇಂದ್ರಗಡದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ 54ಸಾವಿರ ಮೌಲ್ಯದ 180 ಹಾಲಿನ ಪುಡಿ ಪ್ಯಾಕೇಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಾಲಾ ಮಕ್ಕಳ ಆರೋಗ್ಯ ಬಲವರ್ಧನೆಗೆ ಉಪಯೋಗಿಸಬೇಕಾದ ಹಾಲಿನ ಪುಡಿ ಪ್ಯಾಕೇಟ್​ಗಳು ಕಳ್ಳರ ಪಾಲಾಗುತ್ತಿದ್ದು,ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್​ ವ್ಯವಸ್ಥೆಯನ್ನು ಸಾರ್ವಜನಿಕರು ಅನುಮಾನದಿಂದ ನೋಡುವಂತಾಗಿದೆ. ಶಾಲೆಗಳಿಗೆ ಪೂರೈಕೆ ಆಗುವ ಮೊದಲೇ ಅಕ್ರಮ ದಂಧೆಕೋರರ ಉಗ್ರಾಣಗಳಿಗೆ ಹಾಲಿನ ಪುಡಿ ಪ್ಯಾಕೇಟ್​ ರವಾನೆ ಆಗುತ್ತಿವೆ ಮತ್ತು ಶಾಲೆಗಳಿಗೆ ಪೂರೈಕೆಯಾದ ನಂತರವೂ ಕೂಡ ಶಾಲೆಗಳಿಗೆ ಸಂಪರ್ಕ ಸಾಧಿಸುವ ಅಕ್ರಮ ದಂಧೆಕೋರರು ದಲ್ಲಾಳಿ ಮೂಲಕ ಸದ್ದಿಲ್ಲದೇ ಹಾಲಿನ ಪ್ಯಾಕೇಟ್​ ಸಂಗ್ರಹಿಸಿ ಹೊರ ಜಿಲ್ಲೆಗಳಿಗೆ ಮಾರುತ್ತಿದ್ದಾರೆ ಎಂಬ ಬಲವಾದ ಆರೋಪ ಕೇಳೀ ಬಂದಿದೆ.
ಶಾಲಾ ಮಕ್ಕಳಿಗೆ ಪೂರೈಕೆ ಆಗುವ ಈ ಹಾಲಿನ ಪುಡಿಯನ್ನು ಪ್ರತಿ ಕೆಜಿಗೆ 90 ರೂ. ನಿಂದ 140 ರೂ. ಗೆ ಪಡೆದು ಹೊರ ಜಿಲ್ಲೆಗಳಾದ ಗುಲರ್ಬಗಾದ ಕೆಲವು ಭಾಗಗಳಿಗೆ ಮತ್ತು ಮಹಾರಾಷ್ಟ್ರದ ಸೊಲ್ಲಾಪರಕ್ಕೆ 280 ರೂ. ನಿಂದ 400 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ. ಚಾಕಲೇಟ್​, ಸಿಹಿ ಪದಾರ್ಥಗಳ ತಯಾರಿಕೆಗೆ ರಾಜ್ಯದ ಹಾಲಿನ ಪುಡಿ ಬಳಕೆ ಆಗುತ್ತಿದೆ ಎಂಬುದು ವಿಜಯವಾಣಿಗೆ ತಿಳಿದ ಮಾಹಿತಿ. ಈ ಬಗ್ಗೆ ಜಿಲ್ಲಾಡಳಿತ ತೀವ್ರ ತನಿಖೆ ನಡೆಸಿ ಮಕ್ಕಳ ಆರೋಗ್ಯಕ್ಕೆ ಬಳಕೆ ಆಗಬೇಕಿರುವ ಹಾಲಿನ ಪುಡಿ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಬೇಕಿದೆ.


ಎಲ್ಲೆಲ್ಲಿ ಸಂಗ್ರಹ:
ಗದಗ ಭಾಗದ ಬೆಟಗೇರಿಯ ಸೆಟ್ಲಮೆಂಟಿನ ಹನುಮಂತ ದೇವಸ್ಥಾನ ಮತ್ತು ಖಾಸಗಿ ಹೊಟೆಲ್​ ಪಕ್ಕದ ರಸ್ತೆಯ ಮನೆಯೊಂದರಲ್ಲಿ ಹಾಗೂ ನಗರದ ಕಾಯಿಪಲ್ಲೆ ಮಾರುಕಟ್ಟೆ ಸಮೀಪದ ಕಿರಾಣಿ ಅಂಗಡಿಯೊಂದರಲ್ಲಿ ರ ಭಾಗ್ಯ ಯೋಜನೆಯ ಹಾಲಿನ ಪುಡಿ ಅಕ್ರಮ ಸಂಗ್ರಹ ಆಗುತ್ತದೆ. ಖಾಸಗಿ ವಾಹನಗಳ ಮೂಲಕ ಹೊರ ಜಿಲ್ಲೆ, ಹೊರ ರಾಜ್ಯಕ್ಕೆ ರವಾನೆ ಆಗುತ್ತಿದೆ ಪ್ರತಿ ತಿಂಗಳು 7 ರಿಂದ 10 ಟನ್​ ರಭಾಗ್ಯದ ಹಾಲಿನ ಪುಡಿ ಜಿಲ್ಲೆಯಿಂದ ಅಕ್ರಮ ಸಾಗಾಟ ಆಗುತ್ತದೆ ಎಂದು ತಿಳಿದು ಬಂದಿದೆ.


ಅಕ್ಕಿ ಸಾಗಾಟಕ್ಕೂ ಕಡಿವಾಣ ಇಲ್ಲ:
ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ, ಸಾಗಾಟ ಸದ್ದಿಲ್ಲದೇ ಮುಂದುವರಿದಿದೆ. ನಗರದ ಬೆಟಗೇರಿ ಭಾಗದಲ್ಲಿ, ಗಜೇಂದ್ರಗಡ ಮತ್ತು ಮುಂಡರಗಿಯಲ್ಲಿ ಅಕ್ರಮದ ವಾಸೆ ಬಲು ಜೋರಾಗಿ ಕೇಳಿ ಬರುತ್ತಿದ್ದು, ಅಕ್ರಮಕ್ಕೆ ಕಡಿವಾಣ ಹಾಕಲು ಪೊಲೀಸ್​ ಇಲಾಖೆ ಮತ್ತು ಜಿಲ್ಲಾಡಳಿತ ಹರಸಾಹ ಪಡುತ್ತಿದೆ. ಚಾಣಾಕ್ಷ ನಡೆ ಅನುಸರಿಸುತ್ತಿರುವ ಅಕ್ಕಿ ಸಾಗಾಟಗಾರರು ಜಿಲ್ಲಾಡಳಿತಕ್ಕೆ ಚಳ್ಳೆ ಹಣ್ಣು ತಿನ್ನಿಸಿ ದಂಧೆ ಮುಂದುವರಿಸಿದ್ದಾರೆ. ಇದಕ್ಕೆ ಸಾ ಎಂಬಂತೆ ಗಜೇಂದ್ರಗಡದಲ್ಲಿ ಇತ್ತೀಚೆಗೆ ಎರಡು ಬಾರಿ ದಾಳಿ ನಡೆದ ಸಂದರ್ಭದಲ್ಲಿ ಲಾಂತರ ರೂ. ಮೌಲ್ಯದ ಅಕ್ಕಿ ವಶಪಡಿಸಿಕೊಂಡ ಪ್ರಕರಣ ಅಕ್ರಮದ ಮೇಲೆ ಬೆಳಕು ಚೆಲ್ಲಿತ್ತಿದೆ. ಅಕ್ರಮಕ್ಕೆ ಹೊಸ ಸೇರ್ಪಡೆ ಎಂಬಂತೆ ಶಿಕ್ಷಣ ಇಲಾಖೆಯ ಹಾಲಿನ ಪುಡಿ ಸಾಗಾಟವೂ ಸೇರಿಕೊಂಡಿದೆ.

ಪ್ರಸಕ್ತ ವರ್ಷ:
ಏಪ್ರಿಲ್​ 20224ರ ನಂತರ ಅಕ್ಕಿ ಅಕ್ರಮ ಸಾಗಾಟದ ಒಟ್ಟಾರೆ 12 ಪ್ರಕರಣ ಬೆಳಕಿಗೆ ಬಂದಿವೆ. 14.50 ಲಕ್ಷ ಮೌಲ್ಯದ 333 ಕ್ವಿಂಟಾಲ್​ ಅಕ್ಕಿ ವಶ ಹಾಗೂ 24 ಲಕ್ಷ ಮೌಲ್ಯದ ವಿವಿಧ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರ ಬಾಕಿ ಇವೆ. ಪ್ರಸ್ತುತವಾಗಿ ಬೆಟಗೇರಿ, ಮುಂಡರಗಿ ಮತ್ತು ಗಜೇಂದ್ರಗಡದಲ್ಲಿ ಅಕ್ರಮ ಸಾಗಾಟ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಹಿಂದಿನ ವರ್ಷ:
ಕಳೆದ ಸಾಲಿಗಿಂತ ಪ್ರಸಕ್ತ ಸಾಲಿನಲ್ಲಿ ಅಕ್ಕಿ ಸಂಗ್ರಹ ಮತ್ತು ಮಾರಾಟ ಪ್ರಕರಣ ಇಳಕಿಯಾಗಿವೆ. 2022&23 ನೇ ಸಾಲಿನಲ್ಲಿ 38 ಪ್ರಕರಣಗಳಲ್ಲಿ 29 ಲಕ್ಷ ಮೌಲ್ಯದ 1536 ಕ್ವಿಂಟಾಲ್​ ಅಕ್ಕಿ ಜಪ್ತಿ ಮಾಡಲಾಗಿತ್ತು. 54 ಲಕ್ಷ ಮೌಲ್ಯದ 24 ವಿವಿಧ ವಾಹನಗಳನ್ನು ಸೀಜ್​ ಮಾಡಿ 33 ಜನರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. 1.97 ಲಕ್ಷ ಮೌಲ್ಯದ ಎಲ್​ಪಿಜಿ ಸಿಲೆಂಡರ್​ ವಶಪಡಿಸಿಕೊಳ್ಳಲಾಗಿದೆ.

ಅಕ್ಕಿ ಸಂಗ್ರಹ, ಮಾರಾಟ: ಮುಂಡರಗಿ ಭಾಗದಲ್ಲಿ ಅಕ್ರಮಕ್ಕೆ ಕಡಿವಾಣ ಇಲ್ಲ. ಮುಂಡರಗಿಯಿಂದ ಹೂವಿನಹಡಗಲಿ ತಾಲೂಕು ಮೂಲಕ ವಿವಿಧ ಜಿಲ್ಲೆಗಳಿಗೆ ಮತ್ತು ಸ್ಥಳಿಯವಾಗಿ ಅಕ್ಕಿ ಅಕ್ರಮ ಮಾರಾಟ ಆಗುತ್ತಿದೆ ಎನ್ನಲಾಗಿದೆ. ಗಜೇಂದ್ರಗಡ ವ್ಯಾಪ್ತಿಯ ಎಪಿಎಂಸಿ ಪ್ರಾಂಗಣದಲ್ಲಿ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿ ಅಕ್ರಮ ಸಾಗಾಟ ನಡೆಯುತ್ತಿದೆ. ಅದೇ ರೀತಿ ಗದಗಿನ ಬೆಟಗೇರಿ ಭಾಗದಲ್ಲಿ ಈ ದಂಧೆ ಸದ್ದಿಲ್ಲದೇ ರಾಜಾ ರೋಷವಾಗಿ ನಡೆಯುತ್ತಿದ್ದು, ನರಗುಂದ ಮತ್ತು ರೋಣ ತಾಲೂಕಿನ ಮೂಲಕ ಇತರೆ ಜಿಲ್ಲೆಗಳಿಗೆ ರವಾನಿಸಲಾಗುತ್ತಿದೆ ಎಂಬ ಮಾಹಿತಿ ಇದೆ.

ಅಕ್ಕಿ ಜಪ್ತಿ ಏನೇನು?
ವರ್ಷ - ಪ್ರಕರಣ - ಆರೋಪಿಗಳು - ಅಕ್ಕಿ ಪ್ರಮಾಣ(ಕ್ವಿಂಟಾಲ್​) ಮೊತ್ತ
2020 - 16 - 24 - 2255 - 24.32 ಲಕ್ಷ
2021 - 38 - 43 - 2658 - 39.60 ಲಕ್ಷ
2022 - 33 - 33 - 1536 - 29.80 ಲಕ್ಷ

2023(ಈವರೆಗೆ) 12 & 11 & 333 & 14.50 ಲಕ್ಷ

ಕೋಟ್​:
ಬಿಇಓ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಗಜೇಂದ್ರಗಡ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳ ಶಾಲೆಯಲ್ಲಿ ಪರಿಶೀಲನೆ ನಡೆಸಿದೆ. ಗಜೇಂದ್ರಗಡ ತಾಲೂಕಿನ ಶಾಲೆಗಳಲ್ಲಿ ಹಾಲಿನ ಪುಡಿ ಬೇಡಿಕೆ ಮತ್ತು ಪೂರೈಕೆಗಳ ಬಗ್ಗೆ ತನಿಖೆ ನಡೆಸಿದ್ದೇವೆ. ಎೈಆರ್​ ಆಗಿದೆ. ತನಿಖೆ ಮುಂದುವರಿದಿದೆ.

  • ಎಂ.ಎ. ರಡ್ಡೇರ, ಡಿಡಿಪಿಐ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net