ಅಕ್ರಮ ಅಕ್ಕಿ ಸಾಗಣೆ, ಮೂವರ ಬಂಧನ

Arrest Kaidhi
Published on

ಕೊಕಟನೂರ: ಅಥಣಿ ತಾಲೂಕಿನ ಚಿಕ್ಕಟ್ಟಿ ಬಳಿ ಸತ್ತಿ-ಅಥಣಿ ರಸ್ತೆಯಲ್ಲಿ ಸೋಮವಾರ ರಾತ್ರಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸಲಾಗುತ್ತಿದ್ದ ಮೂವರನ್ನು ಬಂಧಿಸಿರುವ ಅಥಣಿ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು 1 ಲಕ್ಷ ರೂ. ಮೌಲ್ಯದ 3,750 ಕೆಜಿ ಅಕ್ಕಿ ವಶಪಡಿಸಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಅಬ್ದುಲ್‌ರಜಾಕ್ ನದಾಫ್ (40), ದಸ್ತಗೀರಸಾಬ್ ಆಸಂಗಿ (32) ಹಾಗೂ ಯಲ್ಲಪ್ಪ ಪಾಣಕನವರ (27) ಬಂಧಿತರು. ಜಮಖಂಡಿ ಕಡೆಯಿಂದ ಹಿಪ್ಪರಗಿ, ಸತ್ತಿ ರಡ್ಡೇರಹಟ್ಟಿ ಮಾರ್ಗವಾಗಿ ಅಥಣಿ ಕಡೆಗೆ ಆಗಮಿಸುತ್ತಿರುವ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.

ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಥಣಿ ರಾಣೆ ಪಿಎಸ್‌ಐ ಕುಮಾರ ಹಾಡಕಾರ, ಆಹಾರ ನಿರೀಕ್ಷಕ ಶರಣಪ್ಪ ಬಾಗೇವಾಡಿ, ತನಿಖಾ ಸಹಾಯಕ ಸಿದ್ದು ಕಲಮನಿ, ಪ್ರಕಾಶ ಕುರಿ, ಭೀಮಶಿ ಮನ್ನಾಪುರೆ, ಎಸ್.ಜಿ ಮನ್ನಾಪುರೆ, ಕೆ.ಬಿ.ಶಿರಗೂರ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net