ಅಕ್ರಮ ಸಾರಾಯಿ ಮಾರಾಟ, ಓರ್ವನ ಬಂಧನ

Arrest Kaidhi
Published on

ಬೋರಗಾಂವ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಢಾಬಾವೊಂದರಲ್ಲಿ ಅನಧಿಕೃತವಾಗಿ ಮಹಾರಾಷ್ಟ್ರದ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸದಲಗಾ ಪೊಲೀಸರು ಬಂಧಿಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಢಾಬಾ ಮಾಲೀಕ ಬರಕತ್ ಮುಜಾವರ ಬಂಧಿತ. 3080 ರೂ. ಮೌಲ್ಯದ 69 ಸಾರಾಯಿ ಬಾಟಲಿಗಳನ್ನು ಹಾಗೂ 1050 ನಗದು ವಶಪಡಿಸಿ ಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net