ಸರ್ಕಾರಿ ಜಾಗದಲ್ಲಿ ಕೆಂಪುಕಲ್ಲು ಅಕ್ರಮ ಗಣಿಗಾರಿಕೆ

Kallu Lead
Published on

ಬೈಂದೂರು ಠಾಣಾ ಪೊಲೀಸರ ದಾಳಿ

ಪ್ರತ್ಯೇಕ ಪ್ರಕರಣ, ಇಬ್ಬರ ಬಂಧನ

ವಿಜಯವಾಣಿ ಸುದ್ದಿಜಾಲ ಉಡುಪಿ

ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೈಂದೂರು ಠಾಣೆ ಪೊಲೀಸರು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

111
ಬೈಂದೂರು ತಾಲೂಕಿನ ಗೊಳಿಹೊಳೆ ಗ್ರಾಮದ ಬಡ್ಕಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಕೆಂಪುಕಲ್ಲು ಗಣಿಕಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸ್​ ಉಪನಿರೀಕ್ಷಕ ತಿಮ್ಮೇಶ ಬಿ. ಎನ್​. ಮತ್ತು ಸಿಬ್ಬಂದಿ ದಾಳಿ ಮಾಡಿದ್ದು, ಸ್ಥಳದಲಿದ್ದ ವ್ಯಕ್ತಿ ಕುಂದಾಪುರ ತಾಲೂಕಿನ ಆಲೂರು ಗ್ರಾಮದ ವಾಟೆ ಕಾಡು ನಿವಾಸಿ ಮನೋಜ ನರಸಿಂಹ ಮೊಗವೀರ (43)ಎಂಬವರನ್ನು ವಿಚಾರಣೆ ನಡೆಸಿದರು. ಕಲ್ಲುಕ್ವಾರೆ ನಡೆಸಲು ಯಾವುದೇ ಪರವಾನಗಿ ಪಡೆಯದೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಲ್ಲು ತೆಗೆಯತ್ತಿರುವುದನ್ನು ಪಂಚರ ಸಮಕ್ಷಮದಲ್ಲಿ ಒಪ್ಪಿಕೊಂಡಿದ್ದರಿಂದ ಆತನನ್ನು ಬಂಧಿಸಿದರು. ಅಲ್ಲದೆ, ಗಣಿಗಾರಿಕೆಗೆ ಬಳಸಿದ್ದ ಕಲ್ಲು ಕಟ್ಟಿಂಗ್​ ಮಾಡುವ ಟಿಲ್ಲರ್​ ವಶಪಡಿಸಿಕೊಂಡಿದ್ದು, ಬೈಂದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
222
Kallu 2
ಇನ್ನೊಂದು ಪ್ರಕರಣದಲ್ಲಿ ಬೈಂದೂರು ಠಾಣಾ ವ್ಯಾಪ್ತಿಯ ಕಾಲ್ತೋಡು ಗ್ರಾಮದ ಕಪ್ಪಡಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ತೆಗೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು, ಸ್ಥಳದಲ್ಲಿದ್ದ ವಿಜಯ ಶೆಟ್ಟಿ (38) ಎಂಬವರನ್ನು ವಿಚಾರಣೆ ನಡೆಸಿದರು. ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದು, ಪಂಚರ ಸಮಕ್ಷಮದಲ್ಲಿ ಸ್ಥಳ ಪರಿಶೀಲಿಸಿ ವ್ಯಕ್ತಿಯನ್ನು ಬಂಧಿಸಿದರು. ಸ್ಥಳದಲ್ಲಿ ಸುಮಾರು 200 ಕೆಂಪುಕಲ್ಲು, ಕಲ್ಲು ಎಬ್ಬಿಸುವ ಟ್ರಾಲಿ ಯಂತ್ರ, ಕಲ್ಲುಗಳನ್ನು ಕಟ್ಟಿಂಗ್​ ಮಾಡುವ ಟಿಲ್ಲರ್​ ವಶಕ್ಕೆ ಪಡೆದಿದ್ದು, ಬೈಂದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net