ಮಂಡ್ಯದಲ್ಲಿ ಅಕ್ರಮ ಗಣಿ ನಡೆಸುವವರಿಗೆ ಹಾಕಿರುವ ದಂಡವೆಷ್ಟು ಗೊತ್ತಾ?

11_11_Mdy_Sp K.Parasurama
Published on

ಮಂಡ್ಯ: ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ ನಡೆಯುವ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ ಮೇಲೆ ದಾಳಿ ನಡೆಸಿ 48,99031 ರೂ ದಂಡ ವಿಧಿಸಲಾಗಿದೆ. ಅಂತೆಯೆ 203 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅಂಕಿ ಅಂಶ ಬಿಡುಗಡೆ ಮಾಡಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ/ಸಾಗಾಣಿಕೆಗೆ ಸಂಬಂಧಿಸಿದಂತೆ 2017ರಲ್ಲಿ 65,500 ರೂ ದಂಡ, 2018ರಲ್ಲಿ 4 ವಾಹನ ವಶ, 2019ರಲ್ಲಿ 11 ವಾಹನ ವಶ ಹಾಗೂ 5 ಸಾವಿರ ರೂ ದಂಡ, 2020ರ ಅಕ್ಟೋಬರ್ ಅಂತ್ಯಕ್ಕೆ 41 ವಾಹನ ವಶ ಮತ್ತು 1,07300 ರೂಗಳ ದಂಡವನ್ನು ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಮತ್ತು ಸಾರಿಗೆ ಇಲಾಖೆ ವಿಧಿಸಿದೆ ಎಂದು ತಿಳಿಸಿದ್ದಾರೆ.
ಇನ್ನು ಅಕ್ರಮ ಕಲ್ಲು ಗಣಿಗಾರಿಕೆ/ಸಾಗಾಣಿಕೆಗೆ ಸಂಬಂಧಿಸಿದಂತೆ 2018ರಲ್ಲಿ 14 ವಾಹನ ವಶ, 1,75800 ರೂ ದಂಡ, 2019ರಲ್ಲಿ 26 ವಾಹನ ವಶ ಮತ್ತು 9,35000 ರೂ ದಂಡ, 2020ರ ಅಕ್ಟೋಬರ್ ಅಂತ್ಯಕ್ಕೆ 107 ವಾಹನ ವಶ ಹಾಗೂ 36,75931 ರೂಗಳ ದಂಡ ವಿಧಿಸಲಾಗಿದೆ ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net