ಅಕ್ರಮ ಹಾಲಿನ ಪೌಡರ್ ವಶಕ್ಕೆ

Milk 17 March 20
Published on

ಬೈಲಹೊಂಗಲ: ಧಾರವಾಡದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 15 ಲಕ್ಷ ರೂ. ಮೌಲ್ಯದ ಆರು ಟನ್ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಮತ್ತು ವಾಹನವನ್ನು ಭಾನುವಾರ ಜಪ್ತಿ ಮಾಡಿರುವ ಬೈಲಹೊಂಗಲ ಠಾಣೆ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

ಬೈಲಹೊಂಗಲ ತಾಲೂಕಿನ ಹೊಸಕುರಗುಂದ ಗ್ರಾಮದ ನಿವಾಸಿ ಚಾಲಕ ಪುಂಡಲೀಕ ಬಸಪ್ಪ ಯಕ್ಕುಂಡಿ ಬಂಧಿತ ಆರೋಪಿ. ಆರೋಪಿಯು ತನ್ನ ಕ್ಯಾಂಟರ್ ವಾಹನದಲ್ಲಿ ತಲಾ 25 ಕೆಜಿ ತೂಕದ 240 ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಅನ್ನು ಧಾರವಾಡ ಜಿಲ್ಲೆಯ ಬೇಲೂರಿನ ಕೈಗಾರಿಕಾ ಪ್ರದೇಶದಿಂದ ಸಾಗಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿ, ಬಂಧಿಸಿದ್ದಾರೆ.

ಬಂಧಿತ ಚಲಾಯಿಸುತ್ತಿದ್ದ 4 ಲಕ್ಷ ರೂ ಬೆಲೆಬಾಳುವ ಕ್ಯಾಂಟರ್ ಹಾಗೂ 15 ಲಕ್ಷ ರೂ. ಮೌಲ್ಯದ ಹಾಲಿನ ಪೌಡರ್ ಅನ್ನು ಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಸಿಪಿಐ ಯು.ಎಚ್.ಸಾತೇನಹಳ್ಳಿ, ಈರಪ್ಪ ರಿತ್ತಿ, ಯು.ಎಚ್. ಪೂಜೇರ, ಎಸ್.ಎ.ಕಬ್ಬೂರ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net