ಅಕ್ರಮ ಮಾಂಸ ಸಾಗಣೆ, ನಾಲ್ವರ ಬಂಧನ

Arrest Kaidhi
Published on

ಉಳ್ಳಾಗಡ್ಡಿ-ಖಾನಾಪುರ: ಯಮಕನಮರಡಿಯಿಂದ ಗೋವಾಕ್ಕೆ ಅಕ್ರಮವಾಗಿ ದನದ ಮಾಂಸ ಸಾಗಣೆ ಮಾಡುತ್ತಿದ್ದ ಎರಡು ವಾಹನಗಳನ್ನು ಯಮಕನಮರಡಿ ಠಾಣೆ ಪೊಲೀಸರು ಘಟಪ್ರಭಾ ನದಿಯ ಸೇತುವೆ ಬಳಿ ಬುಧವಾರ ರಾತ್ರಿ ವಶಕ್ಕೆ ಪಡೆದು ನಾಲ್ವರನ್ನು ಬಂಧಿಸಿದ್ದಾರೆ.

ಗ್ರಾಮದ ಮಂಜುನಾಥ ಈರಪ್ಪ ಹಂಚಿನಮನಿ, ಕಾಲೇಸಾಬ್ ಬಡೇಸಾಬ್ ಬೇಪಾರಿ, ದಸ್ತಗೀರ ಬಡೇಸಾಬ್ ಬೇಪಾರಿ, ಶ್ಯಾನೂಲ್ ಬೇಪಾರಿ ಅವರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net