ಅಕ್ರಮ ಮದ್ಯ ಸಾಗಣೆ, ಇಬ್ಬರ ಬಂಧನ

20-gdg-10
Published on

ಗದಗ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು 15 ಸಾವಿರ ರೂ. ಮೌಲ್ಯದ ಮದ್ಯದ ಪೌಚ್, ಒಂದು ಹುಂಡೈ ಕಾರು ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ತಾಲೂಕಿನ ಬಿಂಕದಕಟ್ಟಿ ಕ್ರಾಸ್ ಸಮೀಪ ಭಾನುವಾರ ನಡೆದಿದೆ. ಕಾರು ಚಾಲಕ ಅಸುಂಡಿ ಗ್ರಾಮದ ಮಂಜುನಾಥ ಪೂಜಾರ, ಈರಣ್ಣ ಬಂಧಿತ ಆರೋಪಿಗಳು. ಗ್ರಾಪಂ ಚುನಾವಣೆಯಲ್ಲಿ ಹಂಚಲು ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 ವಾಹನ, 50 ಆರೋಪಿಗಳ ಬಂಧನ:

ಗ್ರಾಪಂ ಚುನಾವಣೆ ನೀತಿ ಜಾರಿಯಾದ ನಂತರ ಜಿಲ್ಲೆಯಲ್ಲಿ ಅಕ್ರಮ ಮದ್ಯ ಹಾಗೂ ಕಳ್ಳಬಟ್ಟಿ ತಯಾರಿಕೆ, ಸರಬರಾಜು, ಮಾರಾಟ ಕುರಿತು ನ. 30ರಿಂದ 18ರವರೆಗೆ ಜಿಲ್ಲೆಯಲ್ಲಿ ಒಟ್ಟು 79 ಪ್ರಕರಣಗಳು ದಾಖಲಾಗಿವೆ. 226.980 ಲೀ. ಮದ್ಯ, 11 ಲೀ. ಕಳ್ಳಬಟ್ಟಿ, 9 ದ್ವಿಚಕ್ರ ವಾಹನಗಳು, 1 ನಾಲ್ಕು ಚಕ್ರದ ವಾಹನ ಜಪ್ತಿ ಮಾಡಿ, 50 ಆರೋಪಿಗಳನ್ನು ಬಂಧಿಸಲಾಗಿದೆ.

ತಾಲೂಕುವಾರು: ಗದಗ ತಾಲೂಕಿನಲ್ಲಿ 21 ಪ್ರಕರಣಗಳು ದಾಖಲಾಗಿವೆ. 62.330 ಲೀ. ಮದ್ಯ, 2 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿ 10 ಆರೋಪಿಗಳನ್ನು ಬಂಧಿಸಲಾಗಿದೆ. ಮುಂಡರಗಿ ತಾಲೂಕಿನಲ್ಲಿ 13 ಪ್ರಕರಣಗಳು ದಾಖಲಾಗಿವೆ. 57.120 ಲೀ. ಮದ್ಯ, 2 ದ್ವಿಚಕ್ರ, 1 ನಾಲ್ಕು ಚಕ್ರ ವಾಹನ ಜಪ್ತಿ ಮಾಡಿ 9 ಆರೋಪಿಗಳನ್ನು ಬಂಧಿಲಾಗಿದೆ. ನರಗುಂದ ತಾಲೂಕಿನಲ್ಲಿ 15 ಪ್ರಕರಣಗಳು ದಾಖಲಾಗಿವೆ. 43.170 ಲೀ. ಮದ್ಯ, 2 ದ್ವಿ ಚಕ್ರ ವಾಹನಗಳನ್ನು ಜಪ್ತಿ ಮಾಡಿ 12 ಆರೋಪಿಗಳನ್ನು ಬಂಸಲಾಗಿದೆ. ರೋಣ ತಾಲೂಕಿನಲ್ಲಿ 18 ಪ್ರಕರಣಗಳು ದಾಖಲಾಗಿವೆ. 15.970 ಲೀ. ಮದ್ಯ, 11 ಲೀ. ಕಳ್ಳಬಟ್ಟಿ, 1 ದ್ವಿಚಕ್ರ ವಾಹನ ಜಪ್ತಿ ಮಾಡಿ 12 ಆರೋಪಿಗಳನ್ನು ಬಂಧಿಲಾಗಿದೆ. ಶಿರಹಟ್ಟಿ ತಾಲೂಕಿನಲ್ಲಿ 12 ಪ್ರಕರಣಗಳು ದಾಖಲಾಗಿವೆ. 48.390 ಲೀ. ಮದ್ಯ, 2 ದ್ವಿಚಕ್ರ ವಾಹನ ಜಪ್ತಿ ಮಾಡಿ 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಮೋತಿಲಾಲ್ ತಿಳಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net