ಅಕ್ರಮ ಮದ್ಯ ಸಾಗಣೆ, ಇಬ್ಬರ ಬಂಧನ

Arrest Kaidhi
Published on

ಬೆಳಗಾವಿ: ಅಕ್ರಮ ಮದ್ಯ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ತಾಲೂಕಿನ ಮುಚ್ಚಂಡಿ ಗ್ರಾಮದ ಬಳಿ ಬುಧವಾರ ಬಂಧಿಸಿದ್ದಾರೆ. ಬೆಳಗಾವಿ ಜ್ಯೋತಿ ನಗರದ ಮಹೇಶ ಶಂಕರ ಹಾಜಗೋಲಕರ, ಬುಡ್ರೆನೂರ ಗ್ರಾಮದ ಸುರೇಶ ದಾಸಪ್ಪ ನಾಯಕ ಬಂಧಿತರು.

ಬಂಧಿತರಿಂದ 1.55 ಲಕ್ಷ ರೂ. ಮೌಲ್ಯದ ಮದ್ಯ ಮತ್ತು ಮದ್ಯ ಸಾಗಿಸಲು ಬಳಸುತ್ತಿದ್ದ ಅಟೋ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಆಯುಕ್ತ ಮಂಜುನಾಥ, ಉಪ ಆಯುಕ್ತ ಜಯರಾಮಗೌಡ, ಲಿಂಗರಾಜ ಕೆ., ಕಿರಣ ಠಕ್ಕಣ್ಣವರ, ಮಲ್ಲಪ್ಪ ಠಕ್ಕಣ್ಣವರ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net