ಒಂಟಿ ಮನೆಯಲ್ಲಿ ಅಕ್ರಮ ಮದ್ಯ ತಯಾರು: ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ

Illegal liquor seized Mandya
Published on
ಮಂಡ್ಯ: ಇಲ್ಲಿನ ಲಲಿತಾ ನಗರದ ಒಂಟಿ ಮನೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಸುಮಾರು‌ 20 ಲಕ್ಷ ರೂ ಮೌಲ್ಯದ ಮದ್ಯ ಹಾಗೂ ಇತರೆ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ. ಅಂತೆಯೇ ಆರೋಪಿ ನಾಗರಾಜು (35) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಭಾನುವಾರ ಬೆಳಗ್ಗೆ ನಗರದ ರೈಲ್ವೆ ಸ್ಟೇಷನ್‌ ಮುಂಭಾಗದ ಸಿಎಲ್‌–7 ಸನ್ನದು ಮಳಿಗೆ ಮೇಲೆ ಅಬಕಾರಿ ನಿರೀಕ್ಷಕರಾದ ಪುನೀತಾ, ಕೆ.ಕುಮಾರ್‌ ಮತ್ತು ಅಬಕಾರಿ ಉಪ ಅಧೀಕ್ಷಕ ಎಸ್‌.ಸೋಮಶೇಖರ್‌ ನೇತೃತ್ವದಲ್ಲಿ ದಾಳಿ ನಡೆಯಿತು. ಅಲ್ಲಿ 35 ಲೀಟರ್‌ ನಕಲಿ ಮದ್ಯದ ಸ್ಯಾಚೆಟ್‌ಗಳು ಸಿಕ್ಕಿದ್ದವು. ಕೆಲಸ ಮಾಡುವ ಬಾರ್‌ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಲಲಿತಾ ನಗರದ ಮನೆ ಮೇಲೆ ದಾಳಿ ನಡೆದಿದೆ.
ಈ ವೇಳೆ 40 ಸಾವಿರ ರೂ ಮೌಲ್ಯದ 590 ಲೀಟರ್‌ ಸ್ಪಿರಿಟ್‌, 30 ಲೀಟರ್‌ ನಕಲಿ ಮದ್ಯ, 15 ಲಕ್ಷ ರೂ ಮೌಲ್ಯದ ಮದ್ಯ ಸ್ಯಾಚೆಟ್‌ ತಯಾರಿಸುವ ಯಂತ್ರ ಹಾಗೂ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿ, ಸ್ಟಿಕರ್‌ಗಳು ಪತ್ತೆಯಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net