

ಹೊಳೆನರಸೀಪುರ: ಅಕ್ರಮ ಮದ್ಯ ಮಾರಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮದ್ಯ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಹಳೇಕೋಟೆ ಹೋಬಳಿ ದೊಡ್ಡ ಕುಂಚೆ ಗ್ರಾಮದಲ್ಲಿರುವ ಪೆಟ್ಟಿಗೆ ಅಂಗಡಿಯಲ್ಲಿ ಶ್ರೀನಿವಾಸ್ ಎಂಬಾತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕುರಿತು ಗ್ರಾಮಸ್ಥರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ಗ್ರಾಮಕ್ಕೆ ಪೊಲೀಸರು ದಿಢೀರನೆ ದಾಳಿ ಮಾಡಿದರು. ವಿಷಯ ತಿಳಿದ ಶ್ರೀನಿವಾಸ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಳಿಕ ಪೆಟ್ಟಿಗೆ ಅಂಗಡಿಯಲ್ಲಿದ್ದ ವರ್ಜಿನಲ್ ಚಾಯ್ಸ್, ಟೆಟ್ರಾ ಪ್ಯಾಕೆಟ್, ಡುವೆಲ್ಸ್ ರಮ್, ಓಲ್ಡ್ ಟವರ್, ಓಲ್ಡ್ ಮಂಕ್, ಓಲ್ಡ್ ಅಡ್ಮಿರಲ್, ಬ್ಯಾಗ್ ಪೈಪರ್ ಪೆಟ್ರಾ ಪ್ಯಾಕ್ ಅನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.