

ವಿಜಯಪುರ : ತಾಲೂಕಿನ ಕಾರಜೋಳ ಮತ್ತು ಕಾಖಂಡಕಿ ರಸ್ತೆಯಲ್ಲಿ ಅಕ್ರಮ ಕಳ್ಳಬಟ್ಟಿ ಸಾರಾಯಿ ಸಾಗಿಸುತ್ತಿದ್ದವರ ಮೇಲೆ ದಾಳಿ ನಡೆಸಿದ ಅಬಕಾರಿ ಪೊಲೀಸರು 108 ಲೀಟರ್ ಮದ್ಯ ಹಾಗೂ ಸಾಗಾಣಿಕೆಗೆ ಬಳಸಿದ ವಾಹನ ಜಪ್ತಿ ಮಾಡಿದ್ದಾರೆ.
ಅಬಕಾರಿ ಅಪರ ಆಯುಕ್ತರು, ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಅಬಕಾರಿ ಉಪ ಆಯುಕ್ತರು ಹಾಗೂ ಅಬಕಾರಿ ಉಪ ಅಧೀರ ಉಪ ವಿಭಾಗದ ಮಾರ್ಗದರ್ಶನದಲ್ಲಿ ಬುಧವಾರ ಬೆಳಗ್ಗೆ ದಾಳಿ ನಡೆದಿದೆ.
ವಿಜಯಪುರ ವಲಯ ವ್ಯಾಪ್ತಿಯ ಕಾರಜೋಳ ಮತ್ತು ಕಾಖಂಡಕಿ ಗ್ರಾಮಕ್ಕೆ ಹೋಗುವ ಮಾರ್ಗಗಳ ನಡುವಿನ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಸಾರಾಯಿ ಸಾಗಾಣಿಕೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಟ್ಟು 2 ಗೊಬ್ಬರ ಚೀಲದಿಂದ 180 ಎಂಎಲ್ನ 600 ಕಳ್ಳಬಟ್ಟಿ ಸಾರಾಯಿ ಪ್ಯಾಕೆಟ್ ಹಾಗೂ ವಾಹನ ಒಟ್ಟು 42000 ಸಾವಿರ ರೂ.ಗಳ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವಾಹನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಬಕಾರಿ ನಿರೀಕ ಮಂಜುನಾಥ ಶಿರಹಟ್ಟಿ, ಚಾಲಕ ಅಜಿಂ ಮನಗೂಳಿ ಮತ್ತಿತರರಿದ್ದರು.