ಚಿಕ್ಕೇರೂರಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟಿ

Karnataka Rakshana Vedike manavi
Published on

ಹಿರೇಕೆರೂರ: ತಾಲೂಕಿನ ಚಿಕ್ಕೇರೂರ ಗ್ರಾಮದಲ್ಲಿ ಅಕ್ರಮವಾಗಿ ಎಲ್ಲೆಂದರಲ್ಲಿ ಕೆಲವು ಗೂಡಂಗಡಿ, ಹೋಟೆಲ್​ಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಇದನ್ನು ತಡೆಗಟ್ಟುವಂತೆ ಆಗ್ರಹಿಸಿ ಗ್ರಾಮದ ಕರವೇ ಘಟಕದ ವತಿಯಿಂದ ಗುರುವಾರ ಅಬಕಾರಿ ಇಲಾಖೆಯ ಎದುರು ಪ್ರತಿಭಟನೆ ನಡೆಸಿ, ಸಬ್​ಇನ್​ಸ್ಪೆಕ್ಟರ್ ಸುಧಾ ಎಚ್.ಆರ್. ಅವರಿಗೆ ಮನವಿ ಸಲ್ಲಿಸಲಾಯಿತು.

ಕರವೇ ರಾಜ್ಯ ಕಾರ್ಯದರ್ಶಿ ಕರಿಬಸಯ್ಯ ಬಸರಿಹಳ್ಳಿಮಠ ಮಾತನಾಡಿ, ಗ್ರಾಮದಲ್ಲಿ 8ರಿಂದ 10 ಸ್ಥಳಗಳಲ್ಲಿ ಮನೆ, ಅಂಗಡಿ, ಹೋಟೆಲ್​ಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರವೇ ಘಟಕದ ಅಧ್ಯಕ್ಷ ನಾಗರಾಜ ಹರಿಜನ, ಪದಾಧಿಕಾರಿಗಳಾದ ಮಂಜುನಾಥ ಮಟ್ಟಿಮನಿ, ಅಕ್ರಮ ಫಕೀರಸಾಬನವರ, ಮಂಜುನಾಥ ದಾಸರ, ಮುಖತ್ಯಾರ ಪಠಾಣ, ಮುಬಾರಕ್ ಬಳ್ಳಾರಿ, ನಸರುಲ್ಲಾ ಗುಮನಾಳ, ಶಿವಕುಮಾರ ಓಲೇಕಾರ ಹಾಗೂ ಕರವೇ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net