ಗೋವಾಕ್ಕೆ ಸಾಗಿಸುತ್ತಿದ್ದ ಅಕ್ರಮ ಮದ್ಯಸಾರ ಜಪ್ತಿ

20 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬೆಳಗಾವಿ ಕೇಂದ್ರಸ್ಥಾನ ಅಪರ ಅಬಕಾರಿ ಆಯುಕ್ತರು (ಜಾರಿ ಮತ್ತು ಅಪರಾಧ) ಡಾ. ವೈ. ಮಂಜುನಾಥ ಮಾರ್ಗದರ್ಶನದಲ್ಲಿ ಗುರುವಾರ ದಾಳಿ ನಡೆಸಿದ ಅಬಕಾರಿ ಅಽಕಾರಿಗಳ ತಂಡ, 24 ಲಕ್ಷ ರೂಪಾಯಿ ಮೌಲ್ಯದ ಮದ್ಯಸಾರವಿದ್ದ ಟ್ರಕ್ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಲಘಟಗಿ ಶಹರದ ನ್ಯೂ ಶೆಟ್ಟಿ ಲಂಚ್ ಹೋಂ ಬಳಿ ವಾಹನ ತಡೆದು ತಪಾಸಣೆ ಮಾಡಿದಾಗ ಅಕ್ರಮ ಮದ್ಯಸಅರ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ. ವಾಹನದಲ್ಲಿ 40 ಸಾವಿರ ಲೀಟರ್ ಮದ್ಯಸಾರ ಇದ್ದು, ಅದನ್ನು ಗೋವಾಕ್ಕೆ ಸಾಗಾಣಿಕೆ ಮಾಡುತ್ತಿರುವುದು ಚಾಲಕನಿಂದ ತಿಳಿದು ಬಂದಿದೆ.

ರಾಜಸ್ಥಾನದ ಓಂಪ್ರಕಾಶ ವಿರಾದರಾಮ್ ಎಂಬಾತನನ್ನು ಬಂಽಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಬಕಾರಿ ಉಪ ಅಧೀಕ್ಷಕರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಧಾರವಾಡ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ಅಧೀಕ್ಷಕ ಆತ್ಮಲಿಂಗಯ್ಯ ಮಠಪತಿ, ಉಪ ವಿಭಾಗದ ಅಬಕಾರಿ ಉಪ ಅಽÃಕ್ಷಕ ಲಿಂಗರಾಜ ಕೆ. ಹಾಗೂ ಕಲಘಟಗಿ ವಲಯದ ಅಬಕಾರಿ ನಿರೀಕ್ಷಕ ಶಿವಪ್ಪ ಸಣ್ಣಮನಿ ಹಾಗೂ ಸಿಬ್ಬಂದಿ ವರ್ಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net