

ಕಡೂರು: ಗೋವಾದಿಂದ ಯಶವಂತಪುರಕ್ಕೆ ಕಡೂರು ಮಾರ್ಗವಾಗಿ ತೆರಳುತ್ತಿದ್ದ ವಾಸ್ಕೋಡಿ ಗಾಮ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 10 ಸಾವಿರ ಮೌಲ್ಯದ 6 ಲೀಟರ್ ಮದ್ಯವನ್ನು ಬೀರೂರಿನ ರೈಲ್ವೆ ನಿಲ್ದಾಣದಲ್ಲಿ ಬುಧವಾರ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಎಲ್.ಸಿ.ಸಂದೀಪ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಸಿಬ್ಬಂದಿಗಳಾದ ನಾಗೇಂದ್ರ, ಮಂಜುಳಾ, ಉಮೇಶ್, ಈರಪ್ಪ, ಅಶೋಕ್ ಕಾರ್ಯಚರಣೆಯಲ್ಲಿದ್ದರು.