ರಾಜ್ಯದಲ್ಲಿ 430 ಅನಧಿಕೃತ ಲೇಔಟ್​ ಪತ್ತೆ: ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಾಣ - ಆತಂಕದಲ್ಲಿ ನಿವೇಶನದಾರರು

sites
Published on

| ದೇವರಾಜ್​ ಕನಕಪುರ, ಬೆಂಗಳೂರು

ಚಿಕ್ಕದೊಂದು ಸೂರು ಕಟ್ಟಿಕೊಳ್ಳಬೇಕೆಂಬ ಆಸೆಯಿಂದ ಹೊಟ್ಟೆ-ಬಟ್ಟೆ ಕಟ್ಟಿ ಕೂಡಿಟ್ಟ ಹಣದಲ್ಲಿ ಖರೀದಿಸಿದ ನಿವೇಶನಗಳೇ ಕೈತಪ್ಪಿ ಹೋದರೆ ಏನಾಗಬೇಡ? ಇಂಥ ಪರಿಸ್ಥಿತಿ ರಾಜ್ಯದ ಲಾಂತರ ಕುಟುಂಬಗಳಿಗೆ ಎದುರಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ 430 ಬಡಾವಣೆಗಳು ಅನಧಿಕೃತ ಎಂದು ಸರ್ಕಾರ ಗುರುತಿಸಿದೆ. ಕೆಲ ರಿಯಲ್​ ಎಸ್ಟೇಟ್​ ಬಿಲ್ಡರ್​ಗಳು ಹಾಗೂ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಅಮಾಯಕರು ಶಿಕ್ಷೆ ಅನುಭವಿಸುವಂತಾಗಿದೆ. ಸೈಟ್​ ಪಡೆದವರು ನಿವೇಶನ ಕೈತಪ್ಪಿ ಹೋಗುವುದೇ ಎಂಬ ಆತಂಕದಲ್ಲಿದ್ದರೆ, ಇನ್ನೂ ಕೆಲವರು ಹಣ ಪಾವತಿಸಿ ವರ್ಷಗಳೇ ಉರುಳಿದರೂ ಈವರೆಗೆ ನಿವೇಶನ ಕಂಡಿಲ್ಲ.

ಹಣಕ್ಕಾಗಿ ಮೋಸ: ರಿಯಲ್​ ಎಸ್ಟೇಟ್​ ಏಜೆನ್ಸಿಗಳು ಹಾಗೂ ಬಿಲ್ಡರ್​ಗಳು ಬಡಾವಣೆ ನಿರ್ಮಾಣಕ್ಕೆ ವಿಧಿಸಿರುವ ಷರತ್ತುಗಳನ್ನು ಪೂರೈಸಲ್ಲ. ಆದರೆ, ಸಾರ್ವಜನಿಕರಿಗೆ ಎಲ್ಲವೂ ಕಾನೂನುಬದ್ಧವಾಗಿಯೇ ರೂಪಿಸಲಾಗುತ್ತದೆ ಎಂದು ಸುಳ್ಳು ಭರವಸೆ ಕೊಟ್ಟು ಹಣ ಕಟ್ಟಿಸಿಕೊಳ್ಳುತ್ತಾರೆ.

ಸರ್ಕಾರದ ಎಲ್ಲ ನಿಯಮಗಳನ್ನು ಪೂರೈಸುವ ಪ್ರಮಾಣ ತೀರ ಕಡಿಮೆ. ಆತುರದಲ್ಲಿ ಬಡಾವಣೆ ನಿರ್ಮಾಣ ಮಾಡಿ ಜನರಿಂದ ಹಣ ಪಡೆದು ನಿವೇಶನ ಹಂಚಿಕೆ ಮಾಡಿ ಕೈ ತೊಳೆದುಕೊಳ್ಳುತ್ತಾರೆ.

ಅನಧಿಕೃತ ಹೇಗೆ?:

* ಬಡಾವಣೆ ನಿರ್ಮಾಣ ಪೂರ್ವದಲ್ಲಿ ಪಾಲಿಸಬೇಕಾದ ನಿಯಮಾವಳಿಗಳನ್ನು ಅನುಸರಿಸಿಲ್ಲ

*ಬಡಾವಣೆ ನಿರ್ಮಾಣ ಮುನ್ನ ಆಯಾ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆಯ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಬಹುತೇಕ ಲೇಔಟ್​ಗಳ ಭೂ ಪರಿವರ್ತನೆ ಆಗಿಲ್ಲ

*ಕೆಟಿಸಿಪಿ ಕಾಯ್ದೆ 1961 ರ ಕಲಂ 17 ರ ಅಡಿಯಲ್ಲಿ ಆಯಾ ಸ್ಥಳಿಯ ಯೋಜನಾ ಪ್ರಾಧಿಕಾರಕ್ಕೆ ಅಜಿರ್ ಸಲ್ಲಿಸಿ ವಿನ್ಯಾಸ ನೆಗೆ ಅನುಮೋದನೆ ಪಡೆಯಬೇಕು

* ಬಡಾವಣೆಗಳನ್ನು ಅಭಿವೃದ್ಧಿಪಡಿಸುವಾಗ ಶೇ.55 ವಸತಿ ಉದ್ದೇಶಕ್ಕಾಗಿ, ಶೇ.10 ಉದ್ಯಾನ ಹಾಗೂ ಉಳಿದ ಪ್ರದೇಶವನ್ನು ನಾಗರಿಕ ಸೌಲಭ್ಯಕ್ಕಾಗಿ ಮತ್ತು ರಸ್ತೆಗಾಗಿ ಕಾಯ್ದಿರಿಸಬೇಕು

*ಮೂಲಸೌಲಭ್ಯ ಅಭಿವೃದ್ಧಿಪಡಿಸಿದ ನಂತರ ರಸ್ತೆ, ಉದ್ಯಾನ ಪ್ರದೇಶಗಳನ್ನು ನಗರಸಭೆಗೆ ಮತ್ತು ನಾಗರಿಕ ಸೌಲಭ್ಯ ನಿವೇಶನಗಳ ಬಗ್ಗೆ ಆಯಾ ಯೋಜನಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು

*ಕೊನೆಯದಾಗಿ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಪರಿಶೀಲಿಸಿ ನಿವೇಶನಗಳ ಬಿಡುಗಡೆ ಮಾಡಬೇಕು

ಅನುಮತಿಗಿಂತ ಹೆಚ್ಚು ನಿರ್ಮಾಣ

ರಾಜ್ಯದಲ್ಲಿರುವ ಬಡಾವಣೆಗಳ ಪೈಕಿ ಶೇ.90 ಲೇಔಟ್​ಗಳನ್ನು ವ್ಯಕ್ತಿಗಳ ಹೆಸರಿನಲ್ಲಿ ನಿರ್ಮಾಣ ಮಾಡಲಾಗಿದೆ. ಉಳಿದ ಶೇ.10 ಸಂ-ಸಂಸ್ಥೆಗಳ ಹೆಸರಿನಲ್ಲಿವೆ. ಕೆಲ ಲೇಔಟ್​ಗಳಿಗೆ ಆರಂಭದಲ್ಲಿ ನಿಗದಿಪಡಿಸಿದ ಭೂಮಿಗಷ್ಟೇ ಪ್ರಾಧಿಕಾರದಿಂದ ಅನುಮತಿ ಪಡೆಯಲಾಗಿರುತ್ತದೆ. ನಂತರ ಅದರ ವ್ಯಾಪ್ತಿಯನ್ನು ಅಕ್ರಮವಾಗಿ ವಿಸ್ತರಿಸಲಾಗಿದೆ. ಅನುಮತಿ ಪಡೆದಿದ್ದಕ್ಕಿಂತ ಅರ್ಧ ಗುಂಟೆಯಿಂದ 9 ಎಕರೆ ಪ್ರದೇಶದವರೆಗೂ ಲೇಔಟ್​ಗಳನ್ನು ಕಾನೂನು ಬಾಹಿರವಾಗಿ ವಿಸ್ತರಿಸಿರುವುದು ಬಹಿರಂಗವಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು?

ರಾಮನಗರ-2, ಚಿತ್ರದುರ್ಗ-5, ಬಳ್ಳಾರಿ-6, ಮೈಸೂರು- 91, ಕೋಲಾರ- 14, ಹಾವೇರಿ-8, ಶಿವಮೊಗ್ಗ- 23, ಬೆಂಗಳೂರು ನಗರ-8, ಕಲಬುರಗಿ-8, ತುಮಕೂರು-1, ಗದಗ-62,ಯಾದಗಿರಿ-10, ಚಿಕ್ಕಬಳ್ಳಾ ಪುರ-167, ಕೊಪ್ಪಳ- 25 ಇದೆ.

ಮುಂದೇನು?

ಅನಧಿಕೃತ ಬಡಾವಣೆ ನಿಯಂತ್ರಿಸು ವಂತೆ ಎಲ್ಲ ನಗರ ಸ್ಥಳಿಯ ಸಂಸ್ಥೆಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಆದರೆ, ಯಾವ ರೀತಿಯ ಕ್ರಮ ಕೈಗೊಳ್ಳಬೇಕು, ಈವರೆಗೆ ಎಷ್ಟು ಬಡಾವಣೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಮಾಹಿತಿ ಇಲ್ಲ. ಜತೆಗೆ ಅನ್ಯಾಯಕ್ಕೆ ಒಳಗಾದ ಜನರಿಗೆ ಯಾವ ರೀತಿಯಲ್ಲಿ ನ್ಯಾಯ ಒದಗಿಸಲಾಗುತ್ತಿದೆ ಎಂಬ ಮಾಹಿತಿ ನಗರಾಭಿವೃದ್ಧಿ ಇಲಾಖೆ ಬಳಿಯೂ ಇಲ್ಲ.

ಬಿಲ್ಡರ್​ಗಳು ಹೇಳೋದೇನು?

ಬಡಾವಣೆ ನಿರ್ಮಾಣದ ಕೆಲಸ ಅಷ್ಟು ಸುಲಭವಲ್ಲ. ಪ್ರತಿ ಕಡತ ಒಂದು ಮೇಜಿನಿಂದ ಮತ್ತೊಂದು ಮೇಜಿಗೆ ಹೋಗಬೇಕಾದರೆ ಲಂಚ ಕೊಡಲೇಬೇಕು. ಎಲ್ಲ ಸರಿ ಇದ್ದರೂ ಲಂಚಕ್ಕಾಗಿ ಅಧಿಕಾರಿಗಳು ಸಣ್ಣ-ಪುಟ್ಟ ತಕರಾರು ತೆಗೆಯುತ್ತಾರೆ. ಹೆಚ್ಚು ಮಾತನಾಡಿದರೆ, ಕಡತ ವಿಲೇವಾರಿ ಆಗುವುದಿಲ್ಲ. ಸರ್ಕಾರಿ ಅಧಿಕಾರಿಗಳೇ ಎಲ್ಲ ಮಾಡುತ್ತಾರೆ. ಆದರೆ, ಸಿಕ್ಕಿಬಿದ್ದಾಗ ನಮ್ಮನ್ನೇ ಶಿೆಗೆ ಗುರಿಪಡಿಸುತ್ತಾರೆ ಎಂದು ಹೆಸರು ಹೇಳಲಿಚ್ಛಿಸದ ಬಿಲ್ಡರ್​ಗಳು ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net