

ವಿರಾಜಪೇಟೆ:
ವಿರಾಜಪೇಟೆ ತಾಲೂಕು ಹೆಗ್ಗಳ ಗ್ರಾಮದಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಶನಿವಾರ ಅಕ್ರಮ ಬೇಟೆ ಜಾಲವನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದ ಜಿಂಕೆ ಮಾಂಸ, ಇನ್ನೋವಾ ವಾಹನ, ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪೆರುoಬಾಡಿ ಕಡೆಯಿಂದ ಬಿಟ್ಟಂಗಾಲ ಕಡೆಗೆ ಬರುತ್ತಿದ್ದ ಇನ್ನೋವಾ ಕಾರು ತಪಾಸಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.
\ಬೇಟೋಳಿ ಗ್ರಾಮದ ಎಂ.ಎA. ಅಜೀಜ್ (45), ನೆಹರೂ ನಗರದ ಹುಸೈನ್ ಸಿ.ಎ ಅಲಿಯಾಸ್ ಜಂಶೀರ್(32) ಬಂಧಿತ ಆರೋಪಿಗಳು. ಚಾಮಿಯಾಳ ಮೈತಾಡಿಯ ಅಜಿಜ್ (ಅಜ್ಜು ) ಬೇಟೋಳಿ ಗುಂಡಿಗೆರೆಯ ಅಶ್ರಫ್, ಅಲಿಯಾಸ್ ಅಚ್ಚು, ಬೇಟೋಳಿ ಗುಂಡಿಗೆರೆಯ ಶಿಯಾಬ್ ಎಂಬವರು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳು ಮಾಕುಟ್ಟ ರಕ್ಷಿತಾರಣ್ಯದಲ್ಲಿ ಜಿಂಕೆ ಬೇಟೆಯಾಡಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸ್ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕ ಎಂ.ಸಿ. ಮುತ್ತಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.