ಅಕ್ರಮ ರಸಗೊಬ್ಬರ ದಾಸ್ತಾನು ವಶ: 49.6 ಟನ್ ಜಪ್ತಿ ಮಾಡಿದ ಕೃಷಿ ಅಧಿಕಾರಿಗಳು

Illegal fertilizer stockpile seized Mandya
Published on

ಮಂಡ್ಯ: ಪರವಾನಗಿ ಇಲ್ಲದೆ ನಗರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 49.6 ಟನ್ ತೂಕದ ರಸಗೊಬ್ಬರವನ್ನು ಕೃಷಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಜಾಗೃತ ಕೋಶದ ಅಪರ ನಿರ್ದೇಶಕ ದೇವರಾಜು, ಮೈಸೂರು ಉಪ ವಿಭಾಗದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಉಪ ಕೃಷಿ ನಿರ್ದೇಶಕಿ ಎಚ್.ಎನ್.ಮಮತಾ, ಸಹಾಯಕ ಕೃಷಿ ನಿರ್ದೇಶಕ ಯಾದವಬಾಬು, ಮಂಡ್ಯ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುನೀತಾ, ಜಿಲ್ಲಾ ರಸಗೊಬ್ಬರ ಪರಿವೀಕ್ಷಕರಾದ ಎಚ್.ಚನ್ನಕೇಶವಮೂರ್ತಿ(ಜಾರಿ ದಳ) ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಗುಜರಾತ್ ಮೂಲದ ಸಂಸ್ಥೆಗೆ ಸೇರಿದ ರಸಗೊಬ್ಬರ(ಬಯೋಸ್ಟಿಮೂಲೆಂಟ್) ಹಾಗೂ ಎ2/ಎ3 ಪ್ರಮಾಣ ಪತ್ರವಿಲ್ಲದ ಜೈವಿಕ ಪ್ರಚೋದಕಗಳ ರಸಗೊಬ್ಬರವನ್ನು ಜಪ್ತಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net