ಜಮೀನಿಗೆ ಅಕ್ರಮ ಪ್ರವೇಶ, ಬೆಳೆ ನಾಶ

IMG-20250813-WA0008 _1
ಎಚ್.ಡಿ.ಕೋಟೆ ತಾಲೂಕಿನ ಮಾರನಹಾಡಿಯಲ್ಲಿ ಇರುವ ವಿಶ್ವನಾಥ ಸಿದ್ದರಾಮರೆಡ್ಡಿ ಅವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕಲ್ಲು ಕಂಬ ನಾಶಪಡಿಸಿ ಬೆಳೆ ನಷ್ಟ ಮಾಡುತ್ತಿರುವುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ಚಿತ್ರ.
Published on

ಎಚ್.ಡಿ.ಕೋಟೆ: ಜಮೀನಿಗೆ ಮಂಗಳವಾರ ಸಂಜೆ ಅಕ್ರಮ ಪ್ರವೇಶ ಮಾಡಿ ಕಲ್ಲು ಕಂಬಗಳನ್ನು ಧ್ವಂಸ ಮಾಡಿ ಬೆಳೆ ನಷ್ಟ ಮಾಡಿದ ವ್ಯಕ್ತಿಗಳ ವಿರುದ್ಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರನಹಾಡಿಯ ಮಣಿ, ಮಧು, ಮರಿಲಿಂಗಯ್ಯ, ಗಣೇಶ, ಮಹಾದೇಶ, ಮಳಲಿ ಗ್ರಾಮದ ಶಾಂತಕುಮಾರ ಸೇರಿದಂತೆ 25 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಲೂಕಿನ ಎನ್.ಬೆಳ್ತೂರು ಗ್ರಾಮದ ಸರ್ವೇ ನಂ.58ರಲ್ಲಿ 10 ಎಕರೆ ಜಮೀನು ವಿಶ್ವನಾಥ ಸಿದ್ದರಾಮ ರೆಡ್ಡಿ ಅವರಿಗಿದ್ದು, ಈ ಜಮೀನಿಗೆ ಆ.9ರಂದು ಸಂಜೆ 6 ಗಂಟೆಯಲ್ಲಿ ಮಾರನಹಾಡಿಯ ಮಣಿ, ಮಧು, ಮರಿಲಿಂಗಯ್ಯ, ಗಣೇಶ, ಮಹಾದೇಶ, ಮಳಲಿ ಗ್ರಾಮದ ಶಾಂತಕುಮಾರ ಹಾಗೂ ಇತರರು ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜಮೀನಿನ ತಂತಿ ಬೇಲಿ ಕಿತ್ತು ಹಾಕಿ, ಕಂಬಗಳನ್ನು ತುಂಡರಿಸಿ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಜಮೀನು ನೋಡಿಕೊಳ್ಳುತ್ತಿರುವ ವೇಣು ಎಂಬಾತ ಅಂತರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಪಡೆದ ಸಬ್ ಇನ್ಸ್‌ಪೆಕ್ಟರ್ ಚಂದ್ರಹಾಸನ್ ಅವರು ಸ್ಥಳ ಪರಿಶೀಲನೆ ಮತ್ತು ಜಮೀನಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net