ಅಕ್ರಮ ಗೋ ಸಾಗಾಟ ಪತ್ತೆ , ಆರು ಗೋವುಗಳ ರಕ್ಷಣೆ

cow
Published on

ಉಡುಪಿ: ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಗೋವುಗಳನ್ನು ಬೈಂದೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರು ಗೋವುಗಳನ್ನು ರಕ್ಷಿಸಿ ಆರೋಪಿ ಶಬ್ಬೀರ್(35), ಪಿಕಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿಯೊಂದಿಗೆ ಬೈಂದೂರಿನಿಂದ ವಾಹನವನ್ನು ಹಿಂಬಾಲಿಸಿದ ಪೊಲೀಸರು ಭಟ್ಕಳದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಗೋವುಗಳನ್ನು ಬೈಂದೂರು ಪೊಲೀಸ್ ವಸತಿಗೃಹದ ಆವರಣದಲ್ಲಿ ಉಪಚರಿಸಲಾಯಿತು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಪಿ.ಎಸ್.ಐ ಪವನ್ ನಾಯಕ್ ಮತ್ತು ಸಿಬ್ಬಂದಿ ಹೆಡ್‌ಕಾನ್‌ಸ್ಟೆಬಲ್ ಶ್ರೀನಿವಾಸ ನಾಯಕ್, ಸುಜಿತ್, ಅಶೋಕ್ ರಾಠೋಡ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net