ಮರಳು ಅಕ್ರಮ ಸಂಗ್ರಹ

sand
ಸಾಂದರ್ಭಿಕ ಚಿತ್ರ
Published on

ಪಡುಬಿದ್ರಿ: ಕಾಪು ತಾಲೂಕು ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಸಂಕುತೋಟ ಎಂಬಲ್ಲಿ ಹರಿಯುವ ಪಾಪನಾಶಿನಿ ನದಿಯಿಂದ ಅಕ್ರಮವಾಗಿ ಮರಳನ್ನು ಸಂಗ್ರಹಿಸುತ್ತಿದ್ದ ಪಾಂಗಾಳ ಪ್ರಸಾದ್ ಎಂಬುವನ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಮರಳು ಸಂಗ್ರಹಿಸುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಪೊಲೀಸರು ಬುಧವಾರ ಮುಂಜಾನೆ ಸ್ಥಳಕ್ಕೆ ತೆರಳಿದಾಗ ನದಿಯ ಪೂರ್ವ ಬದಿಯ ದಡದಲ್ಲಿ ಮರಳನ್ನು ಸಂಗ್ರಹಿಸಿರುವುದು ಗೊತ್ತಾಗಿದೆ. ಅಲ್ಲಿದ್ದ ವ್ಯಕ್ತಿ ಪೊಲೀಸರನ್ನು ಕಂಡು ನದಿಗೆ ಹಾರಿ ನದಿ ದಾಟಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಪೊಲೀಸರು ವ್ಯಕ್ತಿಯನ್ನು ನೋಡಿ ಗುರುತು ಹಿಡಿದಿದ್ದು, ಆತನು ಪಾಂಗಾಳ ಪ್ರಸಾದ್ ಎಂದು ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಮರಳನ್ನು ತೆಗೆಯುವ ಸಲಕರಣೆ, ಅಂದಾಜು 4 ಯೂನಿಟ್‌ನಷ್ಟು ಮರಳನ್ನು ಜಪ್ತಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net