

ಉಡುಪಿ: ಸಂಕೇಶ್ವರ ದಿಂದ ಮಂಗಳೂರಿಗೆ ಎಮ್ಮೆ ಸಾಗಿಸುತ್ತಿದ್ದ ಪಿಕಪ್ ಟೆಂಪೋ ಅಂಬಾಗಿಲು ಜಂಕ್ಷನ್ ಬಳಿ ಭಾನುವಾರ ಬೆಳಗ್ಗೆ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ 5 ಎಮ್ಮೆಗಳ ಪೈಕಿ 2 ಎಮ್ಮೆಗಳ ಸೊಂಟ ಮುರಿದಿದೆ. ವಾಹನದಲ್ಲಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಓರ್ವ ಪರಿಯಾಗಿದ್ದಾನೆ.
ಶೀತಲ್ ಗಣಪತಿ ಬಾಗಣ್ಣರ ಹಾಗೂ ಯಮನಪ್ಪ ರಮೇಶ್ ಅರ್ಜುನ ವಾಡ ಬಂಧಿತರು. ಪರಶು ಎಂಬಾತ ತಪ್ಪಿಸಿಕೊಂಡಿದ್ದಾನೆ. ಬಂಧಿತ ಆರೋಪಿಗಳು ಗಾಯಗೊಂಡಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ಎಮ್ಮೆ ಸಾಗಿಸುವ ಬಗ್ಗೆ ಪರವಾನಿಗೆ ಮತ್ತು ಖರೀದಿ ಮಾಡಿದ ಬಗ್ಗೆ ರಶೀದಿ ಹಾಜರುಪಡಿಸಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.