

ರಟ್ಟಿಹಳ್ಳಿ: ಬಕ್ರೀದ್ ಹಬ್ಬದ ನಿಮಿತ್ತ ತಾಲೂಕಿನ ಮೈದೂರ ಗ್ರಾಮದ ಖಾಲಿ ಜಾಗದಲ್ಲಿ ಅಕ್ರಮವಾಗಿ ದನ ಕಡಿದ ಇಬ್ಬರು ಇಲ್ಲಿಯ ರಟ್ಟಿಹಳ್ಳಿ ಠಾಣೆ ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆದಿದೆ.
ಗ್ರಾಮದ ಸುಹೀಲ ಬಾಬಜಾನಸಾಬ ಹರಿಹರ (30) ಹಾಗೂ ಇಬ್ರಾಹಿಂ ಮಹಬೂಬಸಾಬ ಗುಬ್ಬಿ (40) ಬಂಧಿತ ಆರೋಪಿಗಳು.
ಇವರು ಬಕ್ರೀದ್ ಹಬ್ಬದ ನಿಮಿತ್ತ ಗ್ರಾಮದ ಮಸೀದಿಯ ಹಿಂಭಾಗದ ಖಾಲಿ ಜಾಗದಲ್ಲಿ ಅಕ್ರಮವಾಗಿ ದನ ಕಡಿಯುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.