ಅಕ್ರಮ ಮದ್ಯ ಸಾಗಣೆ, ಇಬ್ಬರ ಬಂಧನ

0120120
Published on

ಬೆಳಗಾವಿ: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯಸಾಗಣೆ ಮಾಡುತ್ತಿದ್ದ ಪ್ರಕರಣ ಭೇದಿಸಿರುವ ಅಬಕಾರಿ ಇಲಾಖೆ ಸಿಬ್ಬಂದಿ, ಸೋಮವಾರ ಇಬ್ಬರನ್ನು ಬಂಧಿಸಿದ್ದು, ಬೈಕ್ ಹಾಗೂ 4,500 ಲೀಟರ್ ‘ದೇಸಿದಾರು ಸಂತ್ರಾ’ ವಶಪಡಿಸಿಕೊಂಡಿದ್ದಾರೆ.

ಚಿಕ್ಕೋಡಿ ತಾಲೂಕಿನ ಮಾಣಕಾಪುರ ಗ್ರಾಮದ ಜಿತೇಂದ್ರ ಭಜರಂಗ ಚವ್ಹಾಣ, ವಿಜಯ ಮೋಹನ ವರಾಯಿ ಬಂಧಿತರು.

ಅಕ್ರಮ ಮದ್ಯ ಸಾಗಣೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ರಾಜುಗೊಂಡೆ ನೇತೃತ್ವದಲ್ಲಿ ಉಪ ನಿರೀಕ್ಷಕ ಪ್ರವೀಣ ರಂಗಸುಭೆ, ಕೇದಾರಿ ನಲವಡೆ, ಸಾಗರ ಬೋರಗಾವೆ, ಶಿವಕುಮಾರ ಅಮ್ಮಿನಬಾವಿ ದಾಳಿ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net