ವಿವಿಧ ಪ್ರಕರಣದಲ್ಲಿ ನಾಲ್ವರ ಬಂಧನ

arrested
Published on

ಬೆಳಗಾವಿ: ನಗರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಜೂಜಾಟ, ಅಕ್ರಮ ಮದ್ಯ ಮಾರಾಟ, ಸಾರ್ವಜನಿಕರನ್ನು ಹೆದರಿಸುತ್ತಿದ್ದ ರೌಡಿಶೀಟರ್ ಸೇರಿ ನಾಲ್ವರನ್ನು ಗುರುವಾರ ಬಂಧಿಸಿದ್ದಾರೆ.

ನ್ಯೂ ಗಾಂಧಿನಗರದ ರೈಲ್ವೆ ಹಳಿ ಹತ್ತಿರ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವುದಕ್ಕಾಗಿ ಅಥವಾ ಇನ್ನಾವುದೋ ಘೋರ ಕೃತ್ಯವೆಸಗುವ ಉದ್ದೇಶದಿಂದ ತಲವಾರ್ ಹಿಡಿದು ತಿರುಗುತ್ತಿದ್ದ ಉಸ್ಮಾನ್ ಗಲ್ಲಿಯ ಮಲ್ಲಿಕರೆಹಾನ್ ರಫೀಕ್ ಪನ್ನಾಳಕರ್ (25) ಎಂಬಾತನನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ವಿವಿಧೆಡೆ ಜೂಜಾಟ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಅಭಿಷೇಕ ಶಿವಾಪೂರೆ (30), ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಶಕೀಲಅಹ್ಮದ್ ಮೊಹಮ್ಮದಗೌಸ್ ಬಾಗಬಾನ್ (63) ಎಂಬಾತರನ್ನು ಬಂಧಿಸಿ, 5,200 ರೂ. ನಗದು ವಶಪಡಿಸಿಕೊಂಡಿದ್ದಾರೆ. ಗ್ಯಾಂಗವಾಡಿಯಲ್ಲಿ ಕಳ್ಳಬಟ್ಟಿ ಸಾರಾಯಿ ಮಾರುತ್ತಿದ್ದ ಶೀತಲ ಸಕಟ (47) ಎಂಬಾತನನ್ನು ಬಂಧಿಸಲಾಗಿದೆ. ಮಾಳಮಾರುತಿ, ಖಡೇಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net