ಟ್ರಾೃಕ್ಟರ್ ಪಲ್ಟಿಯಾಗಿ 14 ಜನರಿಗೆ ಗಂಭೀರ ಗಾಯ

BKT 16-2
Published on

ಇಳಕಲ್ಲ (ಗ್ರಾ): ಸಮೀಪದ ಕಂದಗಲ್ಲ ರಸ್ತೆಯಲ್ಲಿ ಶನಿವಾರ ಟ್ರಾಲಿಗಳ ಸಹಿತ ಟ್ರಾೃಕ್ಟರ್ ಉರುಳಿ ಬಿದ್ದು 14 ಜನರಿಗೆ ಗಂಭೀರ ಗಾಯಗಳಾಗಿದ್ದು, ಇಳಕಲ್ಲ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕುಷ್ಟಗಿ ತಾಲೂಕಿನ ವಂದಾಲ ಗ್ರಾಮದಿಂದ ಇಳಕಲ್ಲ ತಾಲೂಕಿನ ಕೋಡಿಹಾಳ ಗ್ರಾಮಕ್ಕೆ ಎರಡು ಟ್ರಾಲಿಗಳ ಟ್ರಾೃಕ್ಟರ್‌ನಲ್ಲಿ ಜನರು ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಟ್ರಾೃಕ್ಟರ್ ಉರುಳಿ ಬಿದ್ದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ 108 ಆಂಬುಲೆನ್ಸ್‌ನಲ್ಲಿ ಇಳಕಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ಲ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net