ನಕಲಿ ವೈದ್ಯನ ಬಂಧನ

Arrest Logo Web 600x400
Published on

ಇಳಕಲ್ಲ(ಗ್ರಾ): ರೋಗಿಗಳಿಗೆ ಹೆಚ್ಚಿನ ಪ್ರಮಾಣದ ಔಷಧಗಳನ್ನು ನೀಡಿ ವಂಚಿಸುತ್ತಿದ್ದ ನಕಲಿ ವೈದ್ಯನನ್ನು ಖಚಿತ ಮಾಹಿತಿ ಮೇರೆಗೆ ಸೋಮವಾರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಇಲ್ಲಿಯ ಕಿಲ್ಲಾ ಪ್ರದೇಶದ ಮಾರುತಿ ದೇವಸ್ಥಾನದ ಹಿಂದಿರುವ ಕಟ್ಟಡದಲ್ಲಿ ಸರ್ಕಾರದ ಅನುಮತಿಯಿಲ್ಲದೆ ವೈದ್ಯಕೀಯ ವೃತ್ತಿ ಮಾಡುತ್ತಿದ್ದ ರಾಘು ಕಾಟವಾ ಎಂಬ ನಕಲಿ ವೈದ್ಯನನ್ನು ಪೊಲೀಸರು ಬಂಧಿಸಿ ಹಲವಾರು ಔಷಧಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಹಲವಾರು ಆರ್‌ಎಂಪಿ ವೈದ್ಯರು ತಮ್ಮ ಆಸ್ಪತ್ರೆಗಳನ್ನು ಬಂದ್ ಮಾಡಿಕೊಂಡು ಬೇರೆ ಕಡೆಗೆ ಹೋದ ಪ್ರಸಂಗ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net