ಕುಡಿದ ಮತ್ತಿನಲ್ಲಿ ಪತ್ನಿಯ ಕೊಲೆ

ILK 31
Published on

ಇಳಕಲ್ಲ (ಗ್ರಾ): ನಗರದ ಧರ್ಮಗೌಡ ಪೇಟೆಯಲ್ಲಿ ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ಪತಿಯೊಬ್ಬ ಪತ್ನಿ ಕೊಲೆಗೈದಿದ್ದಾನೆ.

ಮದೀನಾ ಮೆಹಬೂಬಸಾಬ ಬಂಡಿ (26) ಕೊಲೆಯಾದ ಮಹಿಳೆ. ಮೆಹಬೂಬಸಾಬ ಕೊಲೆ ಮಾಡಿದ ಆರೋಪಿ.

ಪತ್ನಿ ಮನೆಯಲ್ಲಿ ಮಲಗಿದ್ದಾಗ ಕುಡಿದ ಮತ್ತಿನಲ್ಲಿದ್ದ ಮೆಹಬೂಬ ಬಲವಾದ ಆಯುಧದಿಂದ ಹೊಡೆದು ಹತ್ಯೆ ಮಾಡಿದ್ದಾನೆ. ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದ ಇಬ್ಬರು ಮಕ್ಕಳು ತಂದೆಯನ್ನು ಪ್ರಶ್ನಿಸಿದಾಗ ಏನಿಲ್ಲ ಸುಮ್ಮನೆ ಮಲಗಿ ಎಂದು ಮಕ್ಕಳನ್ನು ಬೆದರಿಸಿದ್ದಾನೆ. ಬಳಿಕ ಶವದ ಮುಂದೆಯೇ ಆರೋಪಿ ಮತ್ತೆ ಕುಡಿದು ನಿದ್ದೆಗೆ ಜಾರಿದ್ದಾನೆ. ಈ ವೇಳೆ ಮಕ್ಕಳು ಬಾಗಿಲು ತೆರೆದು ಹೊರಗೆ ಬಂದು ನೆರೆ-ಹೊರೆಯವರನ್ನು ಎಬ್ಬಿಸಿದ್ದಾರೆ. ನೆರೆ-ಹೊರೆಯವರು ಮೃತಳ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ. ಸಂಬಂಧಿಕರು ಮನೆಗೆ ಬಂದಾಗ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಡಿಎಸ್‌ಪಿ ನಂದರೆಡ್ಡಿ, ಪಿಎಸ್‌ಐ ಶಿವರಾಜ್ ನಾಯಕವಾಡಿ, ಸಿಪಿಐ ಹೊಸಕೇರಪ್ಪ ಕೋಳೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಳಕಲ್ಲ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net