ಸಹಜ ಸಮೃದ್ಧಿ ಅತ್ಯವಶ್ಯ

ILK 11-2
Published on

ಇಳಕಲ್ಲ: ಜನರನ್ನು ಸ್ವಾವಲಂಬಿಗಳನ್ನಾಗಿಸುವ ಹಾಗೂ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ‘ಸಹಜ ಸಮೃದ್ಧಿಯ ಕಡೆಗೆ ಜೊತೆಯಾಗಿ ನಡೆಯುವ ಬನ್ನಿ’ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಮಹಿಮಾ ಪಟೇಲ ಮನವಿ ಮಾಡಿದರು.

ಕರ್ನಾಟಕದ ಕಲ್ಯಾಣ ಪಾದಯಾತ್ರೆ ನಿಮಿತ್ತ ಇಳಕಲ್ಲಗೆ ಆಗಮಿಸಿದ್ದ ಅವರು, ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶ್ರೀ ವಿಜಯ ಮಹಾಂತೇಶ ಪದವಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಮಾತನಾಡಿದರು.

ಚೇರಮನ್ ಎಂ.ವಿ. ಪಾಟೀಲರು ಮಹಿಮಾ ಪಟೇಲರನ್ನು ಸನ್ಮಾನಿಸಿದರು. ಸಂಘದ ಉಪಾಧ್ಯಕ್ಷ ಸಿ.ಪಿ. ಸಾಲಿಮಠ, ಕಾರ್ಯನಿರ್ವಾಹಕ ಮಂಡಳಿ ಸದಸ್ಯರಾದ ಶರಣಪ್ಪ ಅಕ್ಕಿ, ಬಸವರಾಜ ಕಬ್ಬಿಣದ. ಬಸವರಾಜ ಮರಟದ, ರಾಜಶೇಖರ ಸೂಡಿ ಇದ್ದರು. ಪ್ರೊ. ಜಿ.ಜಿ. ಗಣಿ ಸ್ವಾಗತಿಸಿದರು. ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಬಸವರಾಜ ಸುಗ್ಗಮದ ನಿರೂಪಿಸಿ, ವಂದಿಸಿದರು.

StartFragment

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net