ವಿದ್ಯಾಗಮ ಯಶಸ್ವಿಯಾಗಿ ಅನುಷ್ಠಾನಗೊಳಿಸಿ

ILK 4-1
Published on

ಇಳಕಲ್ಲ: ಕೋವಿಡ್-19ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ವಿದ್ಯಾಗಮ-2ನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಇಳಕಲ್ಲ ವಲಯದ ಶಿಕ್ಷಣ ಸಂಯೋಜಕ ಈಶ್ವರ ಅಂಗಡಿ ಹೇಳಿದರು.

ತಾಲೂಕಿನ ಚಿಕ್ಕಕೊಡಗಲಿ ಎಲ್‌ಟಿ 2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ 2 ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಆರ್‌ಸಿಯ ಬಿಐಆರ್‌ಟಿ ಐ.ಎ. ಪಾವಡೆಗೌಡರ, ಶಿಕ್ಷಕರಾದ ಸಂಗಣ್ಣ ಮಲಗಿಹಾಳ, ವಿ.ವಿ. ದೇವಾಂಗಮಠ, ಕೆ.ಎಂ. ಮಂಟೂರ, ಎ.ಬಿ. ಸಪ್ಪಂಡಿ, ಡಿ.ಎಸ್. ಪೂಜಾರಿ, ವಿಜಯಲಕ್ಷ್ಮೀ ಚಳ್ಳಗಿಡದ ಇದ್ದರು.

ಇಳಕಲ್ಲ ಮಧ್ಯ ವಲಯದ ವ್ಯಾಪ್ತಿ ಶಾಲೆಗಳಿಗೆ ಶಿಕ್ಷಣ ಸಂಯೋಜಕ ಈಶ್ವರ ಅಂಗಡಿ ಭೇಟಿ ನೀಡಿ ಪರಿಶೀಲನೆ ಕೈಗೊಂಡರು. ಐ.ಎ. ಪಾವಡೆಗೌಡರ, ಸಿಆರ್‌ಪಿ ಶಾಂತಕುಮಾರ ಕುಟುಗಮರಿ ಹಾಜರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net