ಆರೋಗ್ಯ ತಪಾಸಣೆ ತುಂಬಾ ಅಗತ್ಯ

ILK NEWS 19-1
Published on

ಇಳಕಲ್ಲ: ಕರೊನಾ ಸೋಂಕು ತಡೆಗಾಗಿ ಸಾರ್ವಜನಿಕರ ಸಂಪರ್ಕ ಇರುವ ಕಿರಾಣಿ ವರ್ತಕರ, ಪತ್ರಕರ್ತರ ಆರೋಗ್ಯ ತಪಾಸಣೆಯನ್ನು ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಭಾನವಾರ ಮಾಡಲಾಯಿತು.

ಭಾರತೀಯ ವೈದ್ಯಕೀಯ ಸಂಸ್ಥೆ ಅಧ್ಯಕ್ಷ ಡಾ.ವಿಠ್ಠಲ ಶ್ಯಾವಿ ನೇತೃತ್ವದಲ್ಲಿ ಪ್ರಮುಖರಾದ ಡಾ.ಮಹಾಂತೇಶ ಕಡಪಟ್ಟಿ, ಮಹಾಂತೇಶ ಅಕ್ಕಿ, ಸುನೀಲ ಭೈರಗೊಂಡನವರ, ಅಭಿಜಿತ್ ಕಾಖಂಡಕಿ, ಡಾ.ಮಹಾಲಿಂಗಪ್ಪ ಗೊಂಗಡಶೆಟ್ಟಿ, ಡಾ.ಶ್ರೀಕಾಂತ ಸಾಕಾ ಕಿರಾಣಿ ಅಂಗಡಿ ಮಾಲೀಕರು, ಕೆಲಸಗಾರರ, ಪತ್ರಕರ್ತರ ಆರೋಗ್ಯ ತಪಾಸಣೆ ಮಾಡಿದರು.

ಡಾ.ವಿಠ್ಠಲ ಶ್ಯಾವಿ ಹಾಗೂ ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ, ಸಾರ್ವಜನಿಕರ ಕಿರಾಣಿ ತರಲು ಅಂಗಡಿ ಹೋಗಿ-ಬರುತ್ತಾರೆ. ಇನ್ನು ಮಾಧ್ಯಮ ಮಿತ್ರರರು ಕೂಡ ಸಾರ್ವಜನಿಕರ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಇಂತಹ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಅಗತ್ಯವಿದೆ. ಇದನ್ನು ನಮ್ಮ ಸಂಸ್ಥೆ ವತಿಯಿಂದ ಉಚಿತವಾಗಿ ಮಾಡಲಾಗಿದ್ದು, ಪ್ರತಿ ವಾರಕ್ಕೊಮ್ಮೆ, ಪೊಲೀಸರ, ಪೌರ ಕಾರ್ಮಿಕರ, ಕಿರಾಣಿ ವರ್ತಕರ, ಮಾಧ್ಯಮ ಮಿತ್ರರರ ಆರೋಗ್ಯ ತಪಾಸಣೆ ನಡೆಯಲಿದೆ ಎಂದರು.

ತಾಲೂಕು ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ.ನವೀನ ಬಿರಾದಾರ, ಶಹರ ಪೊಲೀಸ್ ಠಾಣೆ ಪಿಎಸ್‌ಐ ಆರ್.ವೈ. ಜಲಗೇರಿ, ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಬಿ.ವಿ. ನ್ಯಾಮಗೌಡ, ಪ್ರೆಸ್ ಕ್ಲಬ್ ಅಧ್ಯಕ್ಷ ಸುಲೇಮಾನ್ ಸೇರಿ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net