ಮೂಗು, ಗಂಟಲು ದ್ರವ ಮಾದರಿ ಸಂಗ್ರಹ

ILK 19-1
Published on

ಇಳಕಲ್ಲ: ನಗರದ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ಕೆಲ ವಿದ್ಯಾರ್ಥಿಗಳು ಕೋವಿಡ್-19 ಟೆಸ್ಟ್‌ಗೆ ಒಳಪಟ್ಟರು.

ಸ್ನಾತಕ ಹಾಗೂ ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳ ಆ್ಲೈನ್ ತರಗತಿಗಳನ್ನು ಸರ್ಕಾರದ ಮಾರ್ಗಸೂಚಿಯನ್ವಯ ಆರಂಭಿಸಲಾಗಿದೆ. ಎಲ್ಲ ಸಿಬ್ಬಂದಿ ಕೋವಿಡ್-19 ಟೆಸ್ಟ್‌ನ್ನು ನಗರದ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರದ ಕಿರಿಯ ಪ್ರಯೋಗಾಲಯದ ತಜ್ಞರಾದ ಪ್ರವೀಣ ಆರ್.ಚವಾಣ್, ಶಂಕರಲಿಂಗ ಎಸ್.ತಿಮ್ಮಾಪುರ, ರಾಘವೇಂದ್ರ ಎಸ್.ಹಡಪದ, ಡಾಟಾ ಎಂಟ್ರಿ ಆಪರೇಟರ್ ಶ್ರೀಕಾಂತ ಮಠಪತಿ ನಡೆಸಿದರು. ಮೂಗು ಹಾಗೂ ಗಂಟಲು ದ್ರವ ಮಾದರಿ ಸಂಗ್ರಹಿಸಿದರು.

ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ರತ್ನಾಕರ ಹೂಲಿ ಸ್ವತಃ ಮೂಗು ಹಾಗೂ ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟರು. ಪ್ರಾಚಾರ್ಯ ಹಾಗೂ ಸಿಬ್ಬಂದಿ ವರ್ಗದವರ ಈ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಗುರುತಿನ ಚೀಟಿಯನ್ನು ಧರಿಸಬೇಕು. ವಿದ್ಯಾರ್ಥಿಗಳು ಸೂಚಿತ ನಮೂನೆಯ ಪಾಲಕರ-ಪೋಷಕರ ಒಪ್ಪಿಗೆ ಪತ್ರವನ್ನು ಪಡೆದು ಮಹಾವಿದ್ಯಾಲಯಕ್ಕೆ ಬರಲು ಸೂಚನೆ ನೀಡಲಾಗಿದೆ. ಕಾಲೇಜಿನ ಎಲ್ಲ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಪ್ರಾಚಾರ್ಯ ಡಾ. ಜಿ.ಮಲ್ಲಯ್ಯ ತಿಳಿಸಿದರು.

ಹಾಜರಾತಿ ಬಹಳಷ್ಟು ಕಡಿಮೆ
ನಗರದ ಎಸ್‌ವಿಎಂ ಮಹಾವಿದ್ಯಾಲಯ, ಸರ್ಕಾರಿ ಪದವಿ ಮಹಾವಿದ್ಯಾಲಯಗಳು ಆರಂಭಗೊಂಡರೂ ವಿದ್ಯಾರ್ಥಿಗಳ ಹಾಜರಾತಿ ನಿರಸವಾಗಿತ್ತು.

ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ನಾಗರಾಜ ಮುದಗಲ್ಲ ಪ್ರತಿಕ್ರಿಯಿಸಿ, ಬಹಳಷ್ಟು ಪಾಲಕರು ಕೋವಿಡ್ ಭಯದಿಂದ ಹೊರಬಂದಂತೆ ಕಾಣುತ್ತಿಲ್ಲ. ಈ ಬಾರಿ ಕಾಲೇಜಿಗೆ ಹಾಜರಾಗಲು ಸಿದ್ಧತೆಗಳು ಇರುವುದರಿಂದ ಹಾಜರಾತಿ ಕಡಿಮೆಯಾಗಿದೆ. ಮುಂದಿನ ವಾರದಿಂದ ಹಾಜರಾತಿ ಸುಧಾರಿಸುವ ಭರವಸೆ ಇದೆ ಎಂದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net