ಇಳಕಲ್ಲ ನಗರಸಭೆ ಅಧಿಕಾರಿಗಳಿಗೆ ತರಾಟೆ

Ilakalla Municipality officials thrashed
ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವಂತೆ ಒತ್ತಾಯಿಸಿ ಇಳಕಲ್ಲ ನಗರಸಭೆ ಕಾರ್ಯಾಲಯದಲ್ಲಿ ಕುಲಕರ್ಣಿ ಪೇಟೆ ನಿವಾಸಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
Published on

ಇಳಕಲ್ಲ: ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ನಗರಸಭೆ ಅಧಿಕಾರಿಗಳನ್ನು ನಾಗರಿಕರು ಸೋಮವಾರ ತರಾಟೆಗೆ ತೆಗೆದುಕೊಂಡರು.

ಇಲ್ಲಿನ ಕುಲಕರ್ಣಿ ಪೇಟೆಯ ನಿವಾಸಿಗಳಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ನೀರು ಬಾರದ ಕಾರಣ ನಾಗರಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಮೈಲಿ ದೂರ ನಡೆದುಕೊಂಡು ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಸಾರಿ ಮನವಿ ಸಲ್ಲಿಸಿದರೂ ನಗರಸಭೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ದೂರಿದರು. ನಿವಾಸಿಗಳ ಆಕ್ರೋಶಕ್ಕೆ ನಗರಸಭೆ ಅಧಿಕಾರಿಗಳು ಉತ್ತರಿಸಲಾಗದೆ ತಡಬಡಾಯಿಸಿದರು.

ನಿವೃತ್ತ ಪ್ರಾಧ್ಯಾಪಕ ಆರ್.ಪಿ.ಮಹೀಂದ್ರಕರ, ಬಿ.ಬಾಬು, ಗುರು ಪತ್ತಾರ, ನಾರಾಯಣಪ್ಪ ಹೂಲಗೇರಿ, ಅಮರೇಶ ತುಗ್ಲಿ, ರಾಘು ತುಗ್ಲಿ, ಮಂಜುನಾಥ ಹಡಪದ, ಪ್ರವೀಣ ಕಡೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net