ಈದ್ ಮಿಲಾದ್ ಸರಳ ಆಚರಣೆ

ILK-30-2
Published on

ಇಳಕಲ್ಲ(ಗ್ರಾ): ಪ್ರವಾದಿ ಮಹಮ್ಮದ್ ಪೈಗಂಬರರ ಜೀವನ ಚರಿತ್ರೆಯ ಸಂದೇಶ ಸಾರುವ ಪುಸ್ತಕಗಳನ್ನು ತಾಲೂಕಿನ ಎಲ್ಲ ಹಿರಿಯ ಅಧಿಕಾರಿಗಳಿಗೆ ನೀಡುವ ಮೂಲಕ ಇಲ್ಲಿಯ ಜಮಾಅತೆ ಅಹಲೇ ಸುನ್ನತ ಶಾಖೆ ವತಿಯಿಂದ ಸರಳವಾಗಿ ಈದ್ ಮಿಲಾದ್ ಆಚರಿಸಲಾಯಿತು.

ಶಾಖೆ ರಾಜ್ಯ ಘಟಕದ ಅಧ್ಯಕ್ಷ ಮೌಲಾನಾ ಸೈಯದ್ ಮಹಮ್ಮದ್ ತನ್ವೀರ ಹಾಶ್ಮಿ ಧರ್ಮ ಗುರುಗಳ ಸೂಚನೆಯಂತೆ ರಾಜ್ಯಾದ್ಯಂತ ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು. ಜಬ್ಬಾರ ಕಲಬುರ್ಗಿ, ಯೂಸೂಫ್ ಬಾಗವಾನ, ಜೀಲಾನಿ ಚೋಪದಾರ, ಮಹ್ಮದ್‌ಯೂನೂಸ ಮುದಗಲ್, ಖಾಜಾ ಕೊಡಗಲಿ, ಇಸಾಕ ಹನುಮಸಾಗರ, ದಸ್ತಗೀರ ಮದನಿ, ಅಲ್ಲಾಭಕ್ಷ ಮಾಸಾಪತಿ, ನಬಿ ಬನ್ನು ಸೇರಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net