ಮಕ್ಕಳಿಗೆ ಸಲಕರಣೆ ವಿತರಣೆ

ILK-7-1a
Published on

ಇಳಕಲ್ಲ: ಇಲ್ಲಿನ ಆಶಾದೀಪ ಅಂಗವಿಕಲರ ಸೇವಾ ಸಂಸ್ಥೆ ಮತ್ತು ಗಿಫ್ಟೆಬಲ್ ಇಂಡಿಯಾ ಫೌಂಡೇಷನ್ ಹಾಗೂ ಎಡಿಪಿ ಸಂಸ್ಥೆ ಸಹಯೋಗದಲ್ಲಿ ಬೆಳವಣಿಗೆಯಲ್ಲಿ ನ್ಯೂನತೆ ಹೊಂದಿರುವ ಮಕ್ಕಳಿಗೆ ಪರೀಕ್ಷಿಸಿ ಶ್ರವಣ ಸಲಕರಣೆಗಳನ್ನು ವಿತರಿಸಲಾಯಿತು.

ಸಂಸ್ಥೆ ಅಧ್ಯಕ್ಷ ಚಂದ್ರು ಅಪ್ಪಾಜಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನಿಂದ ಆಗಮಿಸಿದ್ದ ಜಿತಿನ್ ಮತ್ತು ಶರತಲ್ ಅವರು ಶ್ರವಣ ತಪಾಸಣೆ ನಡೆಸಿದರು. ಸಂಯೋಜಕರಾದ ನೇತ್ರಾ ಕಲ್ಯಾಣಕರ, ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ರಘು ಹುಬ್ಬಳ್ಳಿ, ಕೋಶಾಧಿಕಾರಿ ರಾಜು ರಾಜೋಳ್ಳಿ, ಉಪಾಧ್ಯಕ್ಷೆ ಯಶೋಧಾ ವನಕಿ, ನಿರ್ದೇಶಕ ಸುನೀಲ ಬಾಲಗಾವಿ, ಸಲೀಮ ಮುದಗಲ್ಲ, ಹನುಮಂತ ತಳವಾರ, ದೇವರಾಜ ಅಣ್ಣಾಸಾ ನಗರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net