ಇಂದು ಛಾಯಾಚಿತ್ರ ಉದ್ಯಮ ಬಂದ್

Photographic
Published on

ಇಳಕಲ್ಲ (ಗ್ರಾ): ಲಾಕ್‌ಡೌನ್‌ದಿಂದ ತೀವ್ರ ತೊಂದರೆಗೆ ಒಳಗಾಗಿರುವ ಛಾಯಾಚಿತ್ರಗಾರ ಸಮೂಹ ಸರ್ಕಾರದ ಮೇಲೆ ಒತ್ತಡ ಹೇರಲು ಅ.31 ರಂದು ತಮ್ಮ ಉದ್ಯಮವನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಿದೆ.

ನಗರದಲ್ಲಿ ಮತ್ತು ಇಳಕಲ್ಲ ತಾಲೂಕಿನಲ್ಲಿ ಇರುವ ಎಲ್ಲ ಛಾಯಾಗ್ರಾಹಕರು ತಮ್ಮ ತಮ್ಮ ಸ್ಟುಡಿಯೋಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಛಾಯಾಚಿತ್ರ ಸಮೂಹದ ಅಧ್ಯಕ್ಷ ಮಾರುತಿ ಬೋನಾಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net