ನವರಾತ್ರಿ ಹಬ್ಬಕ್ಕೆ ದೇವಸ್ಥಾನಗಳು ಸಜ್ಜು

ILK 15-1
Published on

ಇಳಕಲ್ಲ(ಗ್ರಾ): ಅ.17 ರಿಂದ ಆರಂಭವಾಗಲಿರುವ ನವರಾತ್ರಿ ಉತ್ಸವವನ್ನು ಸರಳವಾಗಿ ಆಚರಿಸಲು ನಗರದ ಎಲ್ಲ ದೇವಸ್ಥಾನಗಳ ಸಮಿತಿಗಳು ನಿರ್ಧರಿಸಿದ್ದು, ಸಕಲ ಸಿದ್ಧತೆ ಮಾಡಿಕೊಂಡಿವೆ.

ನಾಲ್ಕು ಬನಶಂಕರಿ ದೇವಸ್ಥಾನಗಳಾದ ಮುನವಳ್ಳಿಪೇಟೆ, ಗುಬ್ಬಿಪೇಟೆ, ಸಾಲಪೇಟೆ ಮತ್ತು ಕೊಪ್ಪರದ ಪೇಟೆ, ನಾಲ್ಕು ಲಕ್ಷ್ಮೀ ದೇವಿ ದೇವಸ್ಥಾನಗಳಾದ ಲಕ್ಷ್ಮೀಪೇಟೆ, ಹುಡೇದ ಮಹಾಲಕ್ಷ್ಮೀ, ಸಪ್ಪರದ ಪ್ಲಾಟ್ ಲಕ್ಷ್ಮೀ ಗುಡಿ, ಅಲ್ಲದೆ, ನಗರಸಭೆ ಹತ್ತಿರದ ಲಕ್ಷ್ಮ್ಮೀ ದೇವಸ್ಥಾನ, ಅಂಬಾಭವಾನಿ, ದತ್ತಾತ್ರೇಯ, ಶೃಂಗೇರಿ ಶಾರದಾ ದೇವಿ, ಲಕ್ಷ್ಮೀ ವೆಂಕಟೇಶ ದೇವಸ್ಥಾನ, ಹಿಂಗುಲಾಂಬಿಕಾ ದೇವಸ್ಥಾನ, ನೀಲಕಂಠೇಶ್ವರ, ಮಾರ್ಕಂಡೇಶ್ವರ, ಕಾಳಿಕಾದೇವಿ ದೇವಸ್ಥಾನ ಮತ್ತು ನಗರದಲ್ಲಿ ಇರುವ ಬನ್ನಿಕಟ್ಟೆಗಳಲ್ಲಿ ನವರಾತ್ರಿ ಉತ್ಸವವನ್ನು ಆಚರಿಸಲಾಗುವುದು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net