ಹೆದ್ದಾರಿ ಅಪಘಾತದಲ್ಲಿ ಮಹಿಳೆ ಸಾವು

19102020 Kudligi Accident
Published on

ಇಳಕಲ್ಲ: ರಾಷ್ಟ್ರೀಯ ಹೆದ್ದಾರಿ ಗೊರಬಾಳ ಗ್ರಾಮದ ಕ್ರಾಸ್ ಬಳಿ ಬೈಕ್ ಮತ್ತು ಲಾರಿಯ ನಡುವೆ ಮಂಗಳವಾರ ಅಪಘಾತ ಸಂಭವಿಸಿ ಬೈಕ್ ಮೇಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಂಕನಾಳ ಗ್ರಾಮದ ಭುವನೇಶ್ವರಿ ಊರ್ಫ್ ದ್ಯಾಮವ್ವ ಸಂತೋಷ ಗೌಡರ (27) ಮೃತ ಮಹಿಳೆ. ಮಗಳು ದೊಡ್ಡವಳಾಗಿದ್ದಾಳೆ ಎಂದು ಅವಳಿಗೆ ಬಂಗಾರ ಖರೀದಿಸಲು ಮನೆಯ ಪಕ್ಕದ ಮಹಿಳೆಯನ್ನು ಕರೆದುಕೊಂಡು ಇಳಕಲ್ಲಗೆ ತೆರಳುತ್ತಿದ್ದಾಗ ಗೊರಬಾಳ ಗ್ರಾಮದ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಬೈಕ್ ಮೇಲಿದ್ದ ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಪ್ರಥಮ ಚಿಕಿತ್ಸೆಗೆ ಇಳಕಲ್ಲ ಸಾರ್ವಜನಿಕ ಆಸ್ಪತ್ರೆಗೆ ಪೊಲೀಸರು ತಮ್ಮ ವಾಹನದಲ್ಲಿ ಕರೆದೊಯ್ದು ದಾಖಲು ಮಾಡಿದರು. ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವೀಕ್ಷಣೆಗೆ ನೂರಾರು ಜನ ಹೆದ್ದಾರಿ ಮೇಲೆ ಜಮಾಯಿಸಿದ್ದರಿಂದ ಹೈವೇಯಲ್ಲಿ ಸಂಚಾರಕ್ಕೆ ಅಡೆತಡೆ ಉಂಟಾಗಿ ಟ್ರಾಫಿಕ್ ಜಾಮ್‌ವಾಗಿತ್ತು. ಸ್ಥಳಕ್ಕೆ ಸಿಪಿಐ ಅಯ್ಯನಗೌಡ ಪಾಟೀಲ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಪಟ್ಟರು. ಇಳಕಲ್ಲ ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ರಮೇಶ ಜಲಗೇರಿ ತನಿಖೆ ನಡೆಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net