ಸವಾರರ ಬೈಕ್‌ಗಳು ಪೋಲಿಸರ ವಶ

ILK 181
Published on

ಇಳಕಲ್ಲ: ಸರ್ಕಾರ ಜಾರಿಗೆ ತಂದಿರುವ ಲಾಕ್‌ಡೌನ್ 8ನೇ ದಿನವಾದ ಮಂಗಳವಾರ ನಗರದಲ್ಲಿ ಮತ್ತೆ ಬೈಕ್ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.

ಅಗತ್ಯ ವಸ್ತುಗಳ ಖರೀದಿ ಸಮಯ ಬೆಳಗ್ಗೆ 6 ರಿಂದ 10 ಗಂಟೆಯ ನಂತರ ಬಸವೇಶ್ವರ ವೃತ್ತದಿಂದ ಕಂಠಿ ವೃತ್ತದ ರಸ್ತೆಗೆ ಇಳಿದ ಪಿಎಸ್‌ಐ ಎಸ್.ಬಿ. ಪಾಟೀಲ ನೇತೃತ್ವದ ತಂಡ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಸಿದ ಬೈಕ್ ಸವಾರರನ್ನು ನಿಲ್ಲಿಸಿ ವಿಚಾರಣೆಗೆ ಒಳಪಡಿಸಿದರು.

ಆಸ್ಪತ್ರೆ, ಔಷಧ ಅಂಗಡಿ, ಬ್ಯಾಂಕ್, ಕಚೇರಿ ಹೋಗುವ ಬಗ್ಗೆ ಅಗತ್ಯ ದಾಖಲೆಗಳನ್ನು ಜತೆಗೆ ಬೈಕ್ ಕಾಗದ ಪತ್ರಗಳನ್ನು ತೋರಿಸಿದವರಿಗೆ ಮಾತ್ರ ಬಿಟ್ಟರೆ, ಉಳಿದಂತೆ ಏನೇ ನೆಪ ಹೇಳಿದರೂ ಬಿಡದೆ ಬೈಕ್‌ಗಳನ್ನು ವಶಕ್ಕೆ ಪಡೆದರು.

ಯಾವಾಗ ಪೊಲೀಸರು ರಸ್ತೆಗೆ ಇಳಿದು ಬೈಕ್‌ಗಳನ್ನು ಹಿಡಿಯಲು ಆರಂಭಿಸಿದರೋ ಆಗ ರಸ್ತೆಗೆ ಬರುವ ಬೈಕ್‌ಗಳ ಸಂಖ್ಯೆ ಕಡಿಮೆ ಆದವು. ಕಾಲ್ನಡಿಗೆಯಲ್ಲಿ ಹೋಗಿ-ಬರಲು ಜನರು ಪ್ರಾರಂಭ ಮಾಡಿದರು. ಗ್ರಾಮೀಣ ಪ್ರದೇಶದಲ್ಲಿ ಪಿಎಸ್‌ಐ ಬಸವರಾಜ ತಿಪ್ಪಾರಡ್ಡಿ ಕೂಡ ಸಂಚರಿಸಿ ಜನರು ಹೊರ ಬರದಂತೆ ನೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net