255 ಸ್ಥಾನಗಳಿಗೆ 682 ಅಭ್ಯರ್ಥಿಗಳು ಕಣದಲ್ಲಿ

ILK 26-1
Published on

ಇಳಕಲ್ಲ(ಗ್ರಾ): ತಾಲೂಕಿನ 16 ಗ್ರಾಮ ಪಂಚಾಯಿತಿಗಳ 275 ಸ್ಥಾನಗಳ ಪೈಕಿ 20 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 255 ಸ್ಥಾನಗಳಿಗೆ 682 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಲೂಕಿನಲ್ಲಿ ಒಟ್ಟು 127 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. 29 ಅತಿ ಸೂಕ್ಷ್ಮ ಮತಗಟ್ಟೆ, 52 ಸೂಕ್ಷ್ಮ ಮತಗಟ್ಟೆ, 46 ಸಾಮಾನ್ಯ ಮತಗಟ್ಟೆಗಳೆಂದು ವಿಂಗಡಿಸಲಾಗಿದೆ. 1530 ಸಿಬ್ಬಂದಿ ಚುನಾವಣೆ ನಿರ್ವಹಣೆಗಾಗಿ ಶನಿವಾರ ಇಲ್ಲಿಯ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಿಂದ ಮತಪೆಟ್ಟಿಗೆ ಹಾಗೂ ಇತರ ಸಲಕರಣೆಗಳೊಂದಿಗೆ ಸಂಬಂಧಿತ ಮತಗಟ್ಟೆಗಳಿಗೆ ತೆರಳಿದರು.

ಬಾಗಲಕೋಟೆ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ ನೇತೃತ್ವದಲ್ಲಿ ಇಬ್ಬರು ಸಿಪಿಐ, 6 ಪಿಎಸ್‌ಐ, 11 ಎಎಸ್‌ಐ, 117 ಪೊಲೀಸ್ ಸಿಬ್ಬಂದಿ, 2 ಡಿಆರ್ ವಾಹನಗಳು, ಒಂದು ಐಆರ್‌ಬಿ. ವಾಹನ ಮತ್ತು 35 ಗೃಹ ರಕ್ಷಕ ದಳ ಸಿಬ್ಬಂದಿಯನ್ನು ಚುನಾವಣೆಗಾಗಿ ನಿಯೋಜಿಸಲಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net