ಕರೊನಾ ಸೋಂಕಿತರಿಗೆ ಯೋಗಾಭ್ಯಾಸ

ILK 191
Published on

ಇಳಕಲ್ಲ: ಕರೊನಾ ಸೋಂಕಿತರಿಗೆ ಚಿಕಿತ್ಸೆ ಜತೆಗೆ ಯೋಗಾಸನ ಹೇಳಿಕೊಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ನಡೆದಿದೆ.

ಇಲ್ಲಿನ ಕಂದಗಲ್ಲ ರಸ್ತೆಯಲ್ಲಿರುವ ಮೆಟ್ರಿಕ್ ನಂತರ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದ ಕೋವಿಡ್ ಕೇರ್ ಸೆಂಟರ್‌ನಲ್ಲಿ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಸೋಂಕಿತರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಗುರು ಮಠ ಪಿಪಿಇ ಕಿಟ್ ಹಾಕಿಕೊಂಡು ನಿತ್ಯ ಬೆಳಗ್ಗೆ, ಸಂಜೆ ಪ್ರಾಣಾಯಾಮ, ಯೋಗಾಸನ ಮಾಡಿಸಿ ಅವರಲ್ಲಿ ಹೊಸ ಚೈತನ್ಯ ತುಂಬುತ್ತಿದ್ದಾರೆ. ಇದರಿಂದ ಸೋಂಕಿತರ ಮುಖದಲ್ಲಿ ಲವಲವಿಕೆ, ಮಂದಹಾಸ ಮೂಡಿದೆ. ಕೆಲವರು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ.

ತಹಸೀಲ್ದಾರ್ ನಿಂಗಪ್ಪ ಬಿರಾದಾರ, ತಾಲೂಕು ಆರೋಗ್ಯ ಇಲಾಖೆ ಮುಖ್ಯ ವೈದ್ಯಾಧಿಕಾರಿ ಡಾ.ಪ್ರಶಾಂತ ತುಂಬಗಿ, ಇಳಕಲ್ಲ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಚೇತನಾ ಶ್ಯಾವಿ, ಆರೋಗ್ಯ ಇಲಾಖೆಯ ಜಿ.ಬಿ. ಭದ್ರಣ್ಣನವರ, ನಗಸರಭೆ ವ್ಯವಸ್ಥಾಪಕ ನಬಿಸಾಬ ಕಂದಗಲ್ಲ ಇತರರು ಭೇಟಿ ನೀಡಿದರು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net