

ತಾವರಗೇರಾ: ಪಟ್ಟಣದಿಂದ ಬೆಂಗಳೂರಿಗೆ ವಿಆರ್‌ಎಲ್‌ಗ್ರೂಪ್‌ನ ವಿಜಯಾನಂದ ಟ್ರಾವೆಲ್ಸ್‌ನ ಬಸ್ ಸಂಚಾರ ಶನಿವಾರ ಆರಂಭಗೊಂಡಿತು.
ಬಸ್‌ಗೆ ರಾಚಯ್ಯಸ್ವಾಮಿ ಅವರು ವಿಶೇಷವಾಗಿ ಪೂಜೆ ಸಲ್ಲಿಸಿದರು. ಪಟ್ಟಣದಿಂದ 10.30ಕ್ಕೆ ಬೆಂಗಳೂರಿನತ್ತ ಬಸ್ ಸಾಗಿತು. ಪಪಂ ಸದಸ್ಯ ಬಸನಗೌಡ ಓಲಿ, ಹೋಟೆಲ್ ಉದ್ಯಮಿ ಅಶೋಕ ಶೆಟ್ಟಿ , ಬಿಜೆಪಿ ಕುಷ್ಟಗಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಜೂಲಕುಂಟಿ, ವೀರೇಶ ಹೊಸಮನಿ, ಶರಣಪ್ಪ ಕುಂಬಾರ, ಶಾಮೀದ ನಾಗಲಾಪೂರ, ವಿಆರ್‌ಲ್‌ನ ಏಜೆನ್ಸಿದಾರ ಶರಣಬಸವ, ನಾರಾಯಣ ಸಿಂಗ್ ಇನ್ನಿತರರಿದ್ದರು.