ಐಐಟಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

25 Dwd 1(Astitva Gupta)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಬಿಹಾರ ಮೂಲದ ಎಂ.ಟೆಕ್ ಸಂಶೋಧನಾ ವಿದ್ಯಾರ್ಥಿ ಅಸ್ತಿತ್ವ ಗುಪ್ತಾ (21) ಮೃತ ವಿದ್ಯಾರ್ಥಿ. ಐಐಟಿ ಕ್ಯಾಂಪಸ್‌ನಲ್ಲಿ ಶನಿವಾರ ಎನ್‌ಸಿಸಿ ಆಯ್ಕೆಗಾಗಿ ದೈಹಿಕ ಪರೀಕ್ಷೆ ನಡೆಯುತ್ತಿತ್ತು. ಓಡುತ್ತಿದ್ದ ವೇಳೆ ಕುಸಿದುಬಿದ್ದಿದ್ದ ವಿದ್ಯಾರ್ಥಿಗೆ ಸ್ಥಳದಲ್ಲಿ ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಿದ್ದ ವೇಳೆ ತಡರಾತ್ರಿ ಮತ್ತೊಮ್ಮೆ ಹೃದಯಾಘಾತವಾಗಿ ಅಸ್ತಿತ್ವ ಮೃತಪಟ್ಟಿದ್ದಾನೆ. ಐಐಟಿ ಆಡಳಿತ ಮಂಡಳಿಯವರು ಪಾಲಕರನ್ನು ಕರೆಸಿ ಮೃತದೇಹ ಹಸ್ತಾಂತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net