

ಹುಬ್ಬಳ್ಳಿ: ಬೆಂಗಳೂರಿನ ಐಐಎಂ ನಿರ್ದೇಶಕ ಪ್ರೊ. ಯು. ದಿನೇಶ ಕುಮಾರ ಅವರು ಸೆ. 29ರಂದು ನಗರಕ್ಕೆ ಆಗಮಿಸಲಿದ್ದಾರೆ. ಇಲ್ಲಿಯ ಕೆಎಲ್ಇ ಬಿಬಿಎ ಕಾಲೇಜು ಆಯೋಜಿಸಿರುವ ವಿಚಾರ ಸಂಕಿರಣದಲ್ಲಿ ಇವರು ಪ್ರಧಾನ ಭಾಷಣ ಮಾಡುವರು.
ಚೇಂಜಿಂಗ್ ಪ್ಯಾರಾಡಿಗ್ಮಾಸ್ ಆ್ ಬಿಜಿನೆಸ್, ಇಟ್ಸ್ ಫ್ಯೂಚರ್ ಇನ್ ದ ಇವಾಲ್ವಿಂಗ್ ಏಜ್ ಆಫ್ ಎಐ, ಇಟ್ಸ್ ಇಂಪ್ಯಾಕ್ಟ್ ಆನ್ ದ ಫ್ಯೂಚರ್ ಆಫ್ ಬಿಜಿನೆಸ್ ವಿಷಯ ಕುರಿತು ಅವರು ಮಾತನಾಡುವರು ಎಂದು ಬಿಬಿಎ ಕಾಲೇಜಿನ ಪ್ರಕಟಣೆ ತಿಳಿಸಿದೆ.